ಕಾಂಬೋಡಿಯಾ ಫುಟ್‌ಬಾಲ್‌ ತಂಡಕ್ಕೆ ಕೆಸುಕಿ ವ್ಯವಸ್ಥಾಪಕ ಫಾಮ್‌ ಫೆನ್‌: ಜಪಾನ್‌ ಫುಟ್‌ಬಾಲ್‌ ತಂಡದ ಫಾರ್ವರ್ಡ್ ಆಟಗಾರನಾಗಿದ್ದ ಕೆಸುಕಿ ಹೋಂಡಾ ಅವರನ್ನು ಕಾಂಬೋಡಿಯಾ ಫುಟ್‌ಬಾಲ್ ತಂಡದ ವ್ಯವಸ್ಥಾಪಕರಾಗಿ ಭಾನುವಾರ ನೇಮಕ ಮಾಡಲಾಗಿದೆ. ಜುಲೈನಲ್ಲಿ ನಡೆದ ವಿಶ್ವಕಪ್ ಫುಟ್‌ಬಾಲ್ ಟೂರ್ನಿಯಲ್ಲಿ ಬೆಲ್ಜಿಯಂ ಎದುರಿನ ಪಂದ್ಯದಲ್ಲಿ ಸೋತ ನಂತರ ಹೋಂಡ ರಾಷ್ಟ್ರೀಯ ತಂಡದಿಂದ ನಿವೃತ್ತರಾಗಿದ್ದರು. ಈ ತಿಂಗಳ ಆರಂಭದಲ್ಲಿ ಮೆಲ್ಬರ್ನ್‌ನ ಸ್ಥಳೀಯ ತಂಡದಲ್ಲಿ ಆಡಲು ಒಪ್ಪಂದ ಮಾಡಿಕೊಂಡಿದ್ದರು. ಭಾನುವಾರ ಕಾಂಬೋ ಡಿಯಾ ತಂಡದ ಜೊತೆ ಒಪ್ಪಂದ ಮಾಡಿಕೊಂಡ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಈ ತಂಡವನ್ನು ಸ್ಪರ್ಧಾತ್ಮಕ ಫುಟ್‌ಬಾಲ್‌ನಲ್ಲಿ ಆಡಲು ಸಜ್ಜುಗೊಳಿಸುವುದು ನನ್ನ ಮೊದಲ ಆದ್ಯತೆ’ ಎಂದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.