ಬಾರ್ಸಿಲೋನ ತಂಡಕ್ಕೆ ಸ್ಪ್ಯಾನಿಷ್‌ ಕಪ್‌ ಟ್ಯಾಂಜಿಯರ್‌: ಗೆರಾರ್ಡ್ ಪಿಕ್‌ ಹಾಗೂ ಉಸ್ಮಾನ್‌ ಡೆಂಬೆಲ್‌ ಅವರು ಗಳಿಸಿದ ಗೋಲುಗಳ ನೆರವಿನಿಂದ ಬಾರ್ಸಿಲೋನ ತಂಡವು ಸ್ಪ್ಯಾನಿಷ್‌ ಸೂಪರ್‌ ಕಪ್‌ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದೆ. ಭಾನುವಾರ ತಡರಾತ್ರಿ ನಡೆದ ಫೈನಲ್‌ ಪಂದ್ಯದಲ್ಲಿ ಬಾರ್ಸಿಲೋನ ತಂಡವು 2–1 ಗೋಲುಗಳಿಂದ ಸೆವಿಲ್ಲಾ ತಂಡವನ್ನು ಮಣಿಸಿತು. ಈ ಮೂಲಕ 13ನೇ ಬಾರಿ ಈ ಟೂರ್ನಿಯಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿತು. ವಿಜಯೀ ತಂಡದ ಪರವಾಗಿ ಗೆರಾರ್ಡ್‌ ಪಿಕ್‌ (42ನೇ ನಿ.) ಹಾಗೂ ಉಸ್ಮಾನ್‌ ಡೆಂಬೆಲ್‌ (78 ನೇ ನಿ.) ಅವರು ತಲಾ ಒಂದು ಗೋಲು ಗಳಿಸಿದರು. ಸೆವಿಲ್ಲಾ ತಂಡದ ಪರವಾಗಿ ಪಾಬ್ಲೊ ಸಾರಾಬಿಯಾ ಅವರು (9ನೇ ನಿ.) ಗೋಲು ದಾಖಲಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.