ಕೇರಳ ಬ್ಲಾಸ್ಟರ್ಸ್ ತಂಡದ ಷೇರು ಖರೀದಿಸಿದ ಚಿರಂಜೀವಿ ಕೊಚ್ಚಿ: ಸಚಿನ್ ತೆಂಡೂಲ್ಕರ್ಮಾರಿದ ಕೇರಳ ಬ್ಲಾಸ್ಟರ್ಸ್ ತಂಡದ ಶೇ. 20 ಷೇರುಗಳನ್ನು ತೆಲುಗು ಸೂಪರ್ ಸ್ಟಾರ್ ಚಿರಂಜೀವಿ ಮತ್ತು ನಿರ್ಮಾಪಕ ಅಲ್ಲು ಅರವಿಂದ್ ಖರೀದಿಸಿದ್ದಾರೆ.ಇವರೊಂದಿಗೆ ಐಕ್ವೆಸ್ಟ್ ಗ್ರೂಪ್ ಕೂಡಾ ಷೇರು ಖರೀದಿಸಿಕೊಂಡಿದೆ ಎಂದು ಮಲಯಾಳ ಮನೋರಮಾ ಪತ್ರಿಕೆ ವರದಿ ಮಾಡಿದೆ. ಸಚಿನ್ ಮಾರಿದ ಷೇರುಗಳನ್ನು ತಂಡದ ಹೊರಗಿರುವ ಗ್ರೂಪ್‍ಗಳು ಖರೀದಿಸಿವೆ ಎಂದು ಸುದ್ದಿ ಹಬ್ಬಿತ್ತು.ಆದರೆ ಇದು ಸತ್ಯಕ್ಕೆ ದೂರವಾದ ಮಾತು ಎಂದು ಬ್ಲಾಸ್ಟರ್ಸ್ ತಂಡದ ವ್ಯವಸ್ಥಾಪಕರು ಹೇಳಿದ್ದಾರೆ. ಸಚಿನ್ ಅವರು ಮಾರಿದ ಷೇರುಗಳನ್ನು ಖರೀದಿಸಲು ಬೇರೆ ಟೀಂ ಮಾಲೀಕರು ಒಕ್ಕೊರಲಿ ತೀರ್ಮಾನ ಕೈಗೊಂಡಿದ್ದರು. ಇಲ್ಲಿಯವರೆಗೆ ಜತೆಗಿದ್ದ ಸಚಿನ್ ಅವರಿಗೆ ಧನ್ಯವಾದ ಅರ್ಪಿಸಿದ ಮ್ಯಾನೇಜ್‍ಮೆಂಜ್, ಸಚಿನ್ ಸದಾ ಬ್ಲಾಸ್ಟರ್ಸ್ ತಂಡದ ಅಂಗವಾಗಿರುತ್ತಾರೆ ಎಂದು ಪ್ರತಿಕ್ರಿಯಿಸಿದೆ. ಇದನ್ನೂ ಓದಿ ಕೇರಳ ಬ್ಲಾಸ್ಟರ್ಸ್ ತಂಡದ ಷೇರು ಮಾರಿದ ಸಚಿನ್ ತೆಂಡೂಲ್ಕರ್ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.