23 ವರ್ಷದೊಳಗಿನವರ ಫುಟ್‌ಬಾಲ್‌: ಭಾರತ ತಂಡಕ್ಕೆ ಜಯ ನವದೆಹಲಿ : ಫಾರುಖ್‌ ಚೌಧರಿ ಹಾಗೂ ಮನ್ವೀರ್‌ ಸಿಂಗ್‌ ಅವರು ಗಳಿಸಿದ ಗೋಲುಗಳ ನೆರವಿನಿಂದ ಭಾರತದ 23 ವರ್ಷದೊಳಗಿನವರ ಫುಟ್‌ಬಾಲ್‌ ತಂಡವು ರೈಡಲ್ಮೆರ್‌ ಲಯನ್ಸ್‌ ಫುಟ್‌ಬಾಲ್‌ ತಂಡದ ಎದುರಿನ ಅಭ್ಯಾಸ ಪಂದ್ಯದಲ್ಲಿ ಜಯಿಸಿದೆ. ಶುಕ್ರವಾರ ಸಿಡ್ನಿಯ ವ್ಯಾಲೆಂಟೈನ್‌ ಸ್ಪೋರ್ಟ್ಸ್‌ ಪಾರ್ಕ್‌ನಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡವು 4–0ಯಿಂದ ರೈಡಲ್ಮೆರ್‌ ಲಯನ್ಸ್‌ ಫುಟ್‌ಬಾಲ್‌ ಕ್ಲಬ್‌ ವಿರುದ್ದ ಗೆದ್ದಿತು. ಈ ಪಂದ್ಯದಲ್ಲಿ ಫಾರುಖ್‌ ಚೌಧರಿ (6ನೇ ನಿ., 38ನೇ ನಿ.) ಹಾಗೂ ಮನ್ವೀರ್‌ ಸಿಂಗ್‌ (74ನೇ ನಿ., 77ನೇ ನಿ.) ಅವರು ತಲಾ ಎರಡು ಗೋಲು ದಾಖಲಿಸಿದರು. ಸಿಡ್ನಿಯಲ್ಲಿ ನಡೆಯುತ್ತಿರುವ ತರಬೇತಿ ಶಿಬಿರದಲ್ಲಿ ಭಾಗಿಯಾಗಿರುವ ಭಾರತ ತಂಡವು ಆಡಿರುವ ಮೂರು ಅಭ್ಯಾಸ ಪಂದ್ಯಗಳಲ್ಲಿ ಎರಡರಲ್ಲಿ ಜಯಿಸಿದೆ. ಸಿಡ್ನಿ ಫುಟ್‌ಬಾಲ್‌ ಕ್ಲಬ್‌ ಎದುರಿನ ಪಂದ್ಯದಲ್ಲಿ ಸೋತಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.