ದಕ್ಷಿಣ ಹಾಗೂ ಪಶ್ಚಿಮ ವಲಯದ ಅಂಧರ ಫುಟ್‌ಬಾಲ್‌: ಚೆನ್ನೈ ತಂಡಕ್ಕೆ ಜಯ ಬೆಂಗಳೂರು: ಗೇಬ್ರಿಯಲ್‌ ಅವರ ಅಮೋಘ ಆಟದ ನೆರವಿನಿಂದ ಚೆನ್ನೈ ಫುಟ್‌ಬಾಲ್‌ ತಂಡವು ದಕ್ಷಿಣ ಹಾಗೂ ಪಶ್ಚಿಮ ವಲಯದ ಅಂಧರ ಫುಟ್‌ಬಾಲ್‌ ಟೂರ್ನಿಯ ಬೆಂಗಳೂರು ತಂಡದ ವಿರುದ್ಧದ ಪಂದ್ಯದಲ್ಲಿ ಗೆದ್ದಿದೆ. ಶುಕ್ರವಾರ ಇಲ್ಲಿನ ಫೀವರ್‌ ಪಿಚ್‌ ಟರ್ಫ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಚೆನ್ನೈ, 3–0ಯಿಂದ ಸ್ಥಳೀಯ ತಂಡವನ್ನು ಮಣಿಸಿತು. ವಿಜಯೀ ತಂಡದ ಪರವಾಗಿ ಗೇಬ್ರಿಯಲ್‌ ಮೂರು ಗೋಲು ದಾಖಲಿಸಿದರು. ಇನ್ನೊಂದು ಪಂದ್ಯದಲ್ಲಿ ಗುಜರಾತ್‌ ತಂಡವು 3–1 ಗೋಲುಗಳಿಂದ ಕೇರಳ ತಂಡದ ಎದುರು ಜಯಿಸಿತು. ಗುಜರಾತ್‌ ತಂಡದ ನೀರವ್‌ ಅವರು ಮೂರು ಗೋಲು ಗಳಿಸಿದರು. ಮತ್ತೊಂದು ಪಂದ್ಯದಲ್ಲಿ ನ್ಯೂಬೀಸ್‌ ಒನ್‌ ಹಾಗೂ ತಬ್ಸಾ ಮದುರಾ ತಂಡಗಳು ನಿಗದಿತ ಸಮಯದಲ್ಲಿ ಚೆಂಡನ್ನು ಗುರಿ ಮುಟ್ಟಿಸಲು ವಿಫಲವಾದವು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.