ನಾಲ್ಕು ಗೋಲು ಗಳಿಸಿದ ರೊನಾಲ್ಡೊ ಪುತ್ರ ಮಿಲಾನ್‌: ಪೋರ್ಚು ಗಲ್‌ನ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಪುತ್ರ ಚೊಚ್ಚಲ ಪಂದ್ಯದಲ್ಲೇ ಮಿಂಚು ಹರಿಸಿದ್ದಾರೆ. ಯುವೆಂಟಸ್‌ 9 ವರ್ಷದೊಳಗಿನವರ ತಂಡದ ಪರವಾಗಿ ಆಡಿದ ಅವರು ನಾಲ್ಕು ಗೋಲು ಗಳಿಸಿ ಗಮನ ಸೆಳೆದಿದ್ದಾರೆ. ತಂದೆಯ ನೆಚ್ಚಿನ ಏಳನೇ ಸಂಖ್ಯೆಯ ಜರ್ಸಿ ತೊಟ್ಟು ಕಣಕ್ಕೆ ಇಳಿದ ಕ್ರಿಸ್ಟಿಯಾನೊ ರೊನಾಲ್ಡೊ ಜೂನಿಯರ್‌, ಪಂದ್ಯದ ಮೊದಲಾರ್ಧದಲ್ಲಿ ಎರಡು ಮತ್ತು ನಂತರ ಎರಡು ಗೋಲುಗಳನ್ನು ಗಳಿಸಿದರು. ಲೂಸೆಂಟೊ ಎದುರಿನ ಪಂದ್ಯದಲ್ಲಿ ಅವರ ತಂಡ 5–1ರಿಂದ ಗೆದ್ದಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.