ಫುಟ್‌ಬಾಲ್‌: ಎಂಇಜಿ ತಂಡಕ್ಕೆ ಜಯ ಬೆಂಗಳೂರು: ಕ್ಲೆವೆನ್‌ ಮರ್‌ ಹಾಗೂ ವಿಷ್ಣು ಅವರು ಗಳಿಸಿದ ಗೋಲುಗಳ ನೆರವಿನಿಂದ ಎಂಇಜಿ ಮತ್ತು ಸೆಂಟರ್‌ ಎಫ್‌ಸಿ ತಂಡವು ಸಿ. ಪುಟ್ಟಯ್ಯ ಸ್ಮಾರಕ ಸೂಪರ್‌ ಡಿವಿಷನ್‌ ಫುಟ್‌ಬಾಲ್‌ ಟೂರ್ನಿಯ ಪಂದ್ಯದಲ್ಲಿ ಗೆದ್ದಿದೆ. ಗುರುವಾರ ಇಲ್ಲಿನ ಅಶೋಕನಗರದಲ್ಲಿರುವ ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಎಂಇಜಿ ಮತ್ತು ಸೆಂಟರ್‌ ಎಫ್‌ಸಿ ತಂಡವು 2–0 ಗೋಲುಗಳಿಂದ ಓಜೋನ್‌ ಎಫ್‌ಸಿ ತಂಡವನ್ನು ಮಣಿಸಿತು. ವಿಜಯೀ ತಂಡದ ಕ್ಲೆವೆನ್‌ ಮರ್‌ (8ನೇ ನಿ.) ಹಾಗೂ ವಿಷ್ಣು (63 ನೇ ನಿ.) ಅವರು ಚೆಂಡನ್ನು ಗುರಿ ಸೇರಿಸಿದರು. ಇನ್‌ಕಮ್‌ ಟ್ಯಾಕ್ಸ್‌ ತಂಡಕ್ಕೆ ಜಯ: ಶಿವಕುಮಾರ್‌ ಅವರು ದಾಖಲಿಸಿದ ಗೋಲಿನ ನೆರವಿನಿಂದ ಇನ್‌ಕಮ್‌ ಟ್ಯಾಕ್ಸ್‌ ಎಫ್‌ಸಿ ತಂಡವು ಪ್ರಸನ್ನಕುಮಾರ್‌ ಸ್ಮಾರಕ ಎ ಡಿವಿಷನ್‌ ಫುಟ್‌ಬಾಲ್‌ ಟೂರ್ನಿಯ ಪಂದ್ಯದಲ್ಲಿ ಜಯಿಸಿದೆ. ಇನ್‌ಕಮ್‌ ಟ್ಯಾಕ್ಸ್‌ ತಂಡದ ಶಿವಕುಮಾರ್‌ ಅವರು (72ನೇ ನಿ.) ಗೋಲು ಗಳಿಸಿ ಗೆಲುವಿನ ರೂವಾರಿಯಾದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.