ಫುಟ್‌ಬಾಲ್‌: ಸ್ಟೂಡೆಂಟ್ಸ್‌ ಯೂನಿಯನ್‌ಗೆ ಜಯ ಬೆಂಗಳೂರು: ಕ್ಲಿಂಟನ್‌ ಹಾಗೂ ಸುಧೀರ್‌ ಅವರು ಗಳಿಸಿದ ಗೋಲುಗಳ ನೆರವಿನಿಂದ ಸ್ಟೂಡೆಂಟ್ಸ್‌ ಯೂನಿಯನ್‌ ಎಫ್‌ಸಿ ತಂಡವು ಬಿಡಿಎಫ್‌ಎ ಆಶ್ರಯದ ಸಿ. ಪುಟ್ಟಯ್ಯ ಸ್ಮಾರಕ ಸೂಪರ್‌ ಡಿವಿಷನ್‌ ಫುಟ್‌ಬಾಲ್‌ ಟೂರ್ನಿಯಲ್ಲಿ ಜಯ ಸಾಧಿಸಿದೆ. ಶುಕ್ರವಾರ ಇಲ್ಲಿನ ಅಶೋಕನಗರದಲ್ಲಿರುವ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಸ್ಟೂಡೆಂಟ್ಸ್‌ ಯೂನಿಯನ್‌ ತಂಡವು 2–1 ಗೋಲುಗಳಿಂದ ಬೆಂಗಳೂರು ಡ್ರೀಮ್‌ ಯುನೈಟೆಡ್‌ ತಂಡವನ್ನು ಮಣಿಸಿತು. ವಿಜಯೀ ತಂಡದ ಕ್ಲಿಂಟನ್‌ (27 ನೇ ನಿ.) ಹಾಗೂ ಸುಧೀರ್‌ (94 ನೇ ನಿ.) ಅವರು ಚೆಂಡನ್ನು ಗುರಿ ಸೇರಿಸಿದರು. ಬೆಂಗಳೂರು ಡ್ರೀಮ್‌ ಯುನೈಟೆಡ್‌ ತಂಡದ ವಿಷ್ಣು (20 ನೇ ನಿ.) ಅವರು ಗೋಲು ಗಳಿಸಿದರು. ಅಪ್ಪು ಮಿಂಚು: ಅಪ್ಪು ಅವರು ಗಳಿಸಿದ ಗೋಲಿನ ನೆರವಿನಿಂದ ಪರಿಕ್ರಮ ಎಫ್‌ಸಿ ತಂಡವು ಪ್ರಸನ್ನಕುಮಾರ್‌ ಸ್ಮಾರಕ ಎ ಡಿವಿಷನ್‌ ಟೂರ್ನಿಯಲ್ಲಿ ಗೆದ್ದಿದೆ. ‍ಪರಿಕ್ರಮ ಎಫ್‌ಸಿ ತಂಡವು 1–0 ಗೋಲಿನಿಂದ ಪೋಸ್ಟಲ್‌ ಎಫ್‌ಸಿ ತಂಡವನ್ನು ಪರಾಭವಗೊಳಿಸಿತು. ವಿಜಯೀ ತಂಡದ ಅಪ್ಪು ಅವರು (61ನೇ ನಿ.) ಗೋಲು ದಾಖಲಿಸಿ ಗೆಲುವಿನ ರೂವಾರಿಯಾದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.