ರೊನಾಲ್ಡೊ ಎರಡು ಗೋಲು ಮಿಲಾನ್‌: ಕ್ರಿಸ್ಟಿಯಾನೊ ರೊನಾಲ್ಡೊ ಕಾಲ್ಚಳಕದಲ್ಲಿ ಅರಳಿದ ಎರಡು ಗೋಲುಗಳ ಬಲದಿಂದ ವುವೆಂಟಸ್‌ ತಂಡ ಸೀರಿ ‘ಎ’ ಫುಟ್‌ಬಾಲ್‌ ಟೂರ್ನಿಯ ಪಂದ್ಯದಲ್ಲಿ ಗೆದ್ದಿದೆ. ಭಾನುವಾರ ನಡೆದ ಹಣಾಹಣಿಯಲ್ಲಿ ವುವೆಂಟಸ್‌ 2–1 ಗೋಲುಗಳಿಂದ ಸಸ್ಸುವೊಲೊ ತಂಡವನ್ನು ಮಣಿಸಿತು. ವುವೆಂಟಸ್‌ ಜೊತೆ ಒಪ್ಪಂದ ಮಾಡಿಕೊಂಡ ನಂತರ ಆಡಿದ ಮೂರು ಪಂದ್ಯಗಳಲ್ಲಿ ರೊನಾಲ್ಡೊ ಗೋಲು ದಾಖಲಿಸಿರಲಿಲ್ಲ. ಹೀಗಾಗಿ ಸಾಕಷ್ಟು ಟೀಕೆಗೆ ಗುರಿಯಾಗಿದ್ದ ಅವರು ಭಾನುವಾರ ಮೋಡಿ ಮಾಡಿದರು. 50 ಮತ್ತು 65ನೇ ನಿಮಿಷಗಳಲ್ಲಿ ಚೆಂಡನ್ನು ಗುರಿ ಮುಟ್ಟಿಸಿ ಅಭಿಮಾನಿಗಳ ಮನ ಗೆದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.