ರೊನಾಲ್ಡೊ 400 ಮಿಲಾನ್‌: ಯುವೆಂಟಸ್‌ ತಂಡದ ಕ್ರಿಸ್ಟಿಯಾನೊ ರೊನಾಲ್ಡೊ, ಶನಿವಾರ ಫುಟ್‌ಬಾಲ್‌ ಲೋಕದಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸಿದ್ದಾರೆ. ಪೋರ್ಚುಗಲ್‌ನ ರೊನಾಲ್ಡೊ ಯೂರೋಪಿಯನ್‌ ಲೀಗ್‌ನಲ್ಲಿ ಒಟ್ಟು 400 ಗೋಲು ಗಳಿಸಿ ಈ ಸಾಧನೆ ಮಾಡಿದ ಮೊದಲ ಆಟಗಾರ ಎಂಬ ಹಿರಿಮೆ ತಮ್ಮದಾಗಿಸಿಕೊಂಡಿದ್ದಾರೆ. ಜೆನೊವಾ ವಿರುದ್ಧದ ಸೀರಿ ಎ ಲೀಗ್‌ನ ಪಂದ್ಯದಲ್ಲಿ ಒಂದು ಗೋಲು ಗಳಿಸಿ ಅವರು ಈ ಸಾಧನೆ ಮಾಡಿದ್ದಾರೆ. ರಿಯಲ್‌ ಮ್ಯಾಡ್ರಿಡ್‌ ಪರ ಲಾ ಲಿಗಾ ಟೂರ್ನಿಯಲ್ಲಿ 311 ಗೋಲುಗಳನ್ನು ದಾಖಲಿಸಿದ್ದ ರೊನಾಲ್ಡೊ, ಮ್ಯಾಂಚೆಸ್ಟರ್‌ ಯುನೈಟೆಡ್‌ ಪರ ಇಂಗ್ಲಿಷ್‌ ಪ್ರೀಮಿಯರ್‌ ಲೀಗ್‌ನಲ್ಲಿ 84 ಗೋಲು ಬಾರಿಸಿದ್ದರು. ಸೀರಿ ಎ ಲೀಗ್‌ನಲ್ಲಿ ಅವರು ಯುವೆಂಟಸ್‌ ಪರ ಐದು ಗೋಲು ದಾಖಲಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.