ಬ್ಯಾಲನ್‌ ಡಿ ಓರ್‌: ರೊನಾಲ್ಡೊ ಹೆಸರು ಶಿಫಾರಸು ಪ್ಯಾರಿಸ್‌: ಪೋರ್ಚುಗಲ್‌ನ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಹೆಸರನ್ನು ವಿಶ್ವದ ಶ್ರೇಷ್ಠ ಫುಟ್‌ಬಾಲ್‌ ಆಟಗಾರನಿಗೆ ನೀಡುವ ‘ಬ್ಯಾಲನ್‌ ಡಿ ಓರ್‌’ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ. 33 ವರ್ಷದ ಕ್ರಿಸ್ಟಿಯಾನೊ ಈ ಬಾರಿಯ ಫಿಫಾ ವಿಶ್ವಕಪ್‌ನಲ್ಲಿ ‘ಹ್ಯಾಟ್ರಿಕ್‌’ ಗೋಲು ದಾಖಲಿಸಿದ್ದರು. ಅವರು ಒಟ್ಟು ಐದು ಬಾರಿ ಈ ಪ್ರಶಸ್ತಿ ಗೆದ್ದಿದ್ದಾರೆ. ಅರ್ಜೆಂಟೀನಾದ ಲಯೊನೆಲ್‌ ಮೆಸ್ಸಿ ಅವರೂ ಪ್ರಶಸ್ತಿಯ ಕಣದಲ್ಲಿದ್ದಾರೆ. ಅರ್ಜೆಂಟೀನಾದ ಸರ್ಜಿಯೊ ಅಗುರೊ, ಬ್ರೆಜಿಲ್‌ನ ನೇಮರ್‌, ಅಲಿಸನ್‌, ರಾಬರ್ಟೊ ಫಿರ್ಮಿನೊ, ಮಾರ್ಷೆಲೊ, ವೇಲ್ಸ್‌ನ ಗರೆತ್‌ ಬ್ಯಾಲ್‌, ಬೆಲ್ಜಿಯಂನ ಕೆವಿನ್‌ ಡಿ ಬ್ರ್ಯೂನ್‌, ತಿಬೌಟ್‌ ಕರ್ಟಿಸ್‌, ಈಡನ್‌ ಹಜಾರ್ಡ್‌, ಉರುಗ್ವೆಯ ಎಡಿನ್ಸನ್‌ ಕ್ಯಾವನಿ, ಡೀಗೊ ಗೊಡಿನ್‌, ಲೂಯಿಸ್‌ ಸ್ವಾರೆಜ್‌, ಫ್ರಾನ್ಸ್‌ನ ಪಾಲ್‌ ಪೋಗ್ಬಾ, ಕರೀಮ್‌ ಬೆಂಜೆಮಾ, ಆ್ಯಂಟೋಯಿನ್‌ ಗ್ರೀಜ್‌ಮನ್‌, ನಿಗೊಲೊ ಕಾಂಟೆ, ಹ್ಯೂಗೊ ಲೋರಿಸ್‌, ಕೈಲಿಯನ್‌ ಬಾಪೆ, ರಾಫೆಲ್‌ ವಾರೆನ್‌, ಸ್ಪೇನ್‌ನ ಐಸಾಕೊ, ಸರ್ಜಿಯೊ ರಾಮೊಸ್‌, ಇಂಗ್ಲೆಂಡ್‌ನ ಹ್ಯಾರಿ ಕೇನ್‌, ಕ್ರೊವೇಷ್ಯಾದ ಮರಿಯೊ ಮ್ಯಾಂಡ್‌ಜುಕಿಕ್‌, ಲೂಕಾ ಮಾಡ್ರಿಕ್‌, ಇವಾನ್‌ ರ‍್ಯಾಕಿಟಿಕ್‌, ಸೆನೆಗಲ್‌ನ ಸೇಡಿಯೊ ಮಾನ್‌, ಸ್ಲೊವೇನಿಯಾದ ಜಾನ್‌ ಒಬ್ಲಾಕ್‌, ಈಜಿಪ್ಟ್‌ನ ಮೊಹಮ್ಮದ್‌ ಸಲಾ ಅವರ ಹೆಸರುಗಳೂ ಸಂಭಾವ್ಯರ ಪಟ್ಟಿಯಲ್ಲಿವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.