ಬಿಎಫ್‌ಸಿ ಪಂದ್ಯ ಮುಂದೂಡಿಕೆ ನವದೆಹಲಿ (ಪಿಟಿಐ): ಇಂಡಿಯನ್ ಸೂಪರ್‌ ಲೀಗ್‌ನಲ್ಲಿ ಬಿಎಫ್‌ಸಿ ತವರಿನಲ್ಲಿ ಆಡಲಿರುವ ಮುಂದಿನ ಪಂದ್ಯದ ದಿನಾಂಕವನ್ನು ಮುಂದೂಡಲಾಗಿದೆ. ನಿಗದಿತ ವೇಳಾಪಟ್ಟಿಯ ಪ್ರಕಾರ ಬಿಎಫ್‌ಸಿಯ ತವರಿನ ಪಂದ್ಯ ಇದೇ 31ರಂದು ಎಟಿಕೆ ವಿರುದ್ಧ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಬೇಕಾಗಿತ್ತು. ಆದರೆ ರಾಜ್ಯೋತ್ಸವದ ಸಿದ್ಧತೆಗಳನ್ನು ಮಾಡಬೇಕಾಗಿರುವು ದರಿಂದ ಆ ಸಂದರ್ಭದಲ್ಲಿ ಕ್ರೀಡಾಂಗಣ ಲಭ್ಯವಿರು ವುದಿಲ್ಲ. ಹೀಗಾಗಿ ಈ ಪಂದ್ಯವನ್ನು ಡಿಸೆಂಬರ್‌ 13ರಂದು ನಡೆಸಲು ನಿರ್ಧರಿಸಲಾಗಿದೆ. ಅಕ್ಟೋಬರ್‌ 31ರಂದು ಕೋಲ್ಕತ್ತದಲ್ಲಿ ಬಿಎಫ್‌ಸಿ ತಂಡ ಎಟಿಕೆಯನ್ನು ಎದುರಿಸಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.