ಎಫ್‌ಸಿ ಪುಣೆ ತಂಡಕ್ಕೆ ಸೋಲುಣಿಸಿದ ಎಟಿಕೆ ಕೊಚ್ಚಿ: ಎಫ್‌ಸಿ ಪುಣೆ ತಂಡದ ಪ್ರಬಲ ಪೈಪೋಟಿಯನ್ನು ಮೆಟ್ಟಿ ನಿಂತ ಎಟಿಕೆ ತಂಡ ಇಂಡಿಯನ್ ಸೂಪರ್‌ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್‌ ಟೂರ್ನಿಯಲ್ಲಿ ಎಫ್‌ಸಿ ಪುಣೆ ಸಿಟಿ ತಂಡವನ್ನು 1–0ಯಿಂದ ಸೋಲಿಸಿತು. ಇಲ್ಲಿನ ವಿವೇಕಾನಂದ ಯುವ ಭಾರತಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದ ‌ಮೊದಲಾರ್ಧದಲ್ಲಿ ಉಭಯ ತಂಡಗಳಿಗೂ ಗೋಲು ಗಳಿಸಲು ಆಗಲಿಲ್ಲ. ದ್ವಿತೀಯಾರ್ಧದಲ್ಲೂ ಜಿದ್ದಾಜಿದ್ದಿಯ ಹಣಾಹಣಿ ಕಂಡುಬಂತು. 82ನೇ ನಿಮಿಷದಲ್ಲಿ ಗೆರ್ಸನ್ ವಿಯೇರ ಗಳಿಸಿದ ಗೋಲಿನ ಮೂಲಕ ಎಟಿಕೆ ಮುನ್ನಡೆ ಸಾಧಿಸಿತು. ಅಂತಿಮ ನಿಮಿಷಗಳಲ್ಲಿ ತಿರುಗೇಟು ನೀಡಲು ಪುಣೆ ತಂಡದವರು ಮಾಡಿದ ಪ್ರಯತ್ನವನ್ನು ಎಟಿಕೆ ಆಟಗಾರರು ವಿಫಲಗೊಳಿಸಿದರು. ಬ್ಲಾಸ್ಟರ್ಸ್–ಗೋವಾ ಹಣಾಹಣಿ ಇಂದು: ಭಾನುವಾರ ಕೊಚ್ಚಿಯಲ್ಲಿ ನಡೆಯಲಿರುವ ಪಂದ್ಯದಲ್ಲಿ ಆತಿಥೇಯ ಕೇರಳ ಬ್ಲಾಸ್ಟರ್ಸ್ ತಂಡ ಎಫ್‌ಸಿ ಗೋವಾವನ್ನು ಎದುರಿಸಲಿದೆ. ಆಡಿದ ಆರು ಪಂದ್ಯಗಳಲ್ಲಿ ನಾಲ್ಕನ್ನು ಗೆದ್ದಿರುವ ಗೋವಾ ಒಂದು ಪಂದ್ಯದಲ್ಲಿ ಮಾತ್ರ ಸೋತಿದೆ. 13 ಪಾಯಿಂಟ್‌ಗಳೊಂದಿಗೆ ಈ ತಂಡ ಪಾಯಿಂಟ್ ಪಟ್ಟಿಯ ಅಗ್ರ ಸ್ಥಾನದಲ್ಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.