ಫುಟ್‌ಬಾಲ್: ಎಫ್‌ಸಿ ಡೆಕ್ಕನ್‌, ಎಎಸ್‌ಸಿ ತಂಡಗಳು ಸೆಮಿಗೆ ಬೆಂಗಳೂರು: ಎಫ್‌ಸಿ ಡೆಕ್ಕನ್‌ ಮತ್ತು ಎಎಸ್‌ಸಿ ಆ್ಯಂಡ್ ಸೆಂಟರ್ ತಂಡಗಳು ಬಿಡಿಎಫ್‌ಎ ಆಶ್ರಯದ ಫುಟ್‌ಬಾಲ್ ಟೂರ್ನಿಯ ಸೆಮಿಫೈನಲ್ ಪ್ರವೇಶಿಸಿದವು. ಅಶೋಕನಗರದ ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪ್ರಸನ್ನ ಕುಮಾರ್ ಸ್ಮಾರಕ ‘ಎ’ ಡಿವಿಷನ್ ಪಂದ್ಯದಲ್ಲಿ ಡೆಕ್ಕನ್‌ 4–3ರಿಂದ ಎಜಿಒಆರ್‌ಸಿಯನ್ನು ಮಣಿಸಿತು. ‘ಜಿ’ ಗುಂಪಿನ ಈ ಪಂದ್ಯದಲ್ಲಿ ಡೆಕ್ಕನ್ ಪರವಾಗಿ ವಿಕ್ರಂ (9ನೇ ನಿಮಿಷ), ಸೂರ್ಯ (33ನೇ ನಿ), ಅಜಿತ್‌ (43ನೇ ನಿ) ಮತ್ತು ಮೈಕೆಲ್‌ (45ನೇ ನಿ) ಗೋಲು ಗಳಿಸಿದರು. ಎಜಿಒಆರ್‌ಸಿಗೆ ಮುರಳೀಧರನ್‌ (31ನೇ ನಿ), ಸಂತೋಷ್ (38ನೇ ನಿ) ಮತ್ತು ಸನತ್‌ (40+3ನೇ ನಿ) ಗೋಲು ತಂದಿತ್ತರು. ಸಿ.ಪುಟ್ಟಯ್ಯ ಸ್ಮಾರಕ ಸೂಪರ್ ಡಿವಿಷನ್ ಟೂರ್ನಿಯ ’ಸಿ’ ಗುಂಪಿನ ಪಂದ್ಯದಲ್ಲಿ ಎಎಸ್‌ಸಿ ಆ್ಯಂಡ್‌ ಸೆಂಟರ್‌ ತಂಡ 2–1ರಿಂದ ಕಿಕ್‌ಸ್ಟಾರ್ಟ್ ಎಫ್‌ಸಿಯನ್ನು ಮಣಿಸಿತು. ಕಿಕ್‌ ಸ್ಟಾರ್ಟ್ ತಂಡದ ದೀಪನ್‌ 39ನೇ ನಿಮಿಷದಲ್ಲಿ ಗೋಲು ಗಳಿಸಿ ತಂಡಕ್ಕೆ ಮುನ್ನಡೆ ತಂದು ಕೊಟ್ಟಿದ್ದರು. ಆದರೆ 77 ಮತ್ತು 78ನೇ ನಿಮಿಷಗಳಲ್ಲಿ ಚೆಂಡನ್ನು ಗುರಿ ಸೇರಿಸಿದ ಜೋತಿನ್ ಸಿಂಗ್‌ ಅವರು ಎಎಸ್‌ಸಿ ಆ್ಯಂಡ್‌ ಸೆಂಟರ್‌ಗೆ ಜಯ ಗಳಿಸಿಕೊಟ್ಟರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.