ಫುಟ್‌ಬಾಲ್‌: ಎಂಇಜಿ ತಂಡಕ್ಕೆ ಗೆಲುವು ಬೆಂಗಳೂರು: ಮುಜೀಬ್ ಗಳಿಸಿದ ಎರಡು ಗೋಲುಗಳ ನೆರವಿನಿಂದ ಎಂಇಜಿ ಆ್ಯಂಡ್‌ ಸೆಂಟರ್‌ ಎಫ್‌ಸಿ ತಂಡ ಬಿಡಿಎಫ್‌ಎ ಆಶ್ರಯದ ಸಿ.ಪುಟ್ಟಯ್ಯ ಸ್ಮಾರಕ ಕಪ್‌ ಸೂಪರ್‌ ಡಿವಿಷನ್‌ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಗೆದ್ದಿದೆ. ಶನಿವಾರ ನಡೆದ ‘ಎ’ ಗುಂಪಿನ ಹಣಾಹಣಿಯಲ್ಲಿ ಎಂಇಜಿ 3–1 ಗೋಲುಗಳಿಂದ ಸ್ಟೂಡೆಂಟ್ಸ್‌ ಯೂನಿಯನ್‌ ಎಫ್‌ಸಿ ತಂಡವನ್ನು ಸೋಲಿಸಿತು. ಎಂಇಜಿ ತಂಡದ ಮುಜೀಬ್‌ 77 ಮತ್ತು 90+1ನೇ ನಿಮಿಷಗಳಲ್ಲಿ ಚೆಂಡನ್ನು ಗುರಿ ಮುಟ್ಟಿಸಿದರು. ವಿ.ರಾಮು 29ನೇ ನಿಮಿಷದಲ್ಲಿ ಗೋಲು ದಾಖಲಿಸಿದರು. ಸ್ಟೂಡೆಂಟ್ಸ್‌ ತಂಡದ ಇಮ್ಯಾನುಯೆಲ್ 59ನೇ ನಿಮಿಷದಲ್ಲಿ ಗೋಲು ಬಾರಿಸಿದರು. ಪ್ರಸನ್ನಕುಮಾರ್‌ ಸ್ಮಾರಕ ‘ಎ’ ಡಿವಿಷನ್‌ ಲೀಗ್‌ನ ‘ಜಿ’ ಗುಂಪಿನ ಪಂದ್ಯದಲ್ಲಿ ಡಿವೈಇಎಸ್‌ ಎಫ್‌ಸಿ 2–1 ಗೋಲುಗಳಿಂದ ಆರ್‌.ಎಸ್‌.ಸ್ಪೋರ್ಟ್ಸ್‌ ಎಫ್‌ಸಿ ತಂಡದ ಎದುರು ಗೆದ್ದಿತು. ವಿಜಯಿ ತಂಡದ ದಿಲೀಪ್‌ (32ನೇ ನಿಮಿಷ) ಮತ್ತು ಶರಣಪ್ಪ (40ನೇ ನಿ.) ತಲಾ ಒಂದು ಗೋಲು ಗಳಿಸಿದರು. ಆರ್‌.ಎಸ್‌.ಸ್ಪೋರ್ಟ್ಸ್‌ ತಂಡದ ಉದಯ್‌ ಕುಮಾರ್‌ 40+1ನೇ ನಿಮಿಷದಲ್ಲಿ ಚೆಂಡನ್ನು ಗುರಿ ತಲುಪಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.