ಫುಟ್‌ಬಾಲ್‌: ಪೋಸ್ಟಲ್‌ಗೆ ಜಯ ಬೆಂಗಳೂರು: ಆ್ಯಂಡ್ರ್ಯೂ ಗಳಿಸಿದ ಏಕೈಕ ಗೋಲಿನ ನೆರವಿನಿಂದ ಪೋಸ್ಟಲ್‌ ಎಫ್‌ಸಿ ತಂಡ ಬಿಡಿಎಫ್‌ಎ ಆಶ್ರಯದಲ್ಲಿ ಪ್ರಸನ್ನಕುಮಾರ್‌ ಸ್ಮಾರಕ ಶೀಲ್ಡ್‌ಗಾಗಿ ನಡೆಯುತ್ತಿರುವ ‘ಎಚ್‌’ ಗುಂಪಿನ ಪಂದ್ಯದಲ್ಲಿ ಗೆದ್ದಿದೆ. ಮಂಗಳವಾರ ನಡೆದ ಹಣಾಹಣಿಯಲ್ಲಿ ಪೋಸ್ಟಲ್‌ 1–0 ಗೋಲಿನಿಂದ ಇನ್‌ಕಮ್‌ ಟ್ಯಾಕ್ಸ್‌ ಎಫ್‌ಸಿ ತಂಡವನ್ನು ಮಣಿಸಿತು. ಆ್ಯಂಡ್ರ್ಯೂ 40+2ನೇ ನಿಮಿಷದಲ್ಲಿ ಗೋಲು ಬಾರಿಸಿದರು. ಸಿ.‍ಪುಟ್ಟಯ್ಯ ಸ್ಮಾರಕ ಕಪ್‌ಗಾಗಿ ನಡೆಯುತ್ತಿರುವ ಸೂಪರ್‌ ಡಿವಿಷನ್‌ ಲೀಗ್‌ನ ಬೆಂಗಳೂರು ಡ್ರೀಮ್‌ ಯುನೈಟೆಡ್‌ ಮತ್ತು ಓಜೋನ್‌ ಎಫ್‌ಸಿ ಬೆಂಗಳೂರು ನಡುವಣ ಪಂದ್ಯ ಗೋಲು ರಹಿತ ಡ್ರಾ ಆಯಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.