ಫುಟ್‌ಬಾಲ್‌: ಬಿಎಫ್‌ಸಿ ‘ಬಿ’ ಜಯಭೇರಿ ಬೆಂಗಳೂರು: ಅಲ್ತಮಶ್‌ ಸೈಯದ್ ಅವರ ಅಮೋಘ ಆಟದ ನೆರವಿನಿಂದ ಬೆಂಗಳೂರು ಎಫ್‌ಸಿ ‘ಬಿ’ ತಂಡ ಬಿಡಿಎಫ್‌ಎ ಸೂಪರ್ ಡಿವಿಷನ್ ಟೂರ್ನಿಯ ಪಂದ್ಯದಲ್ಲಿ 2–0ಯಿಂದ ಗೆದ್ದಿತು. ಶುಕ್ರವಾರದ ಪಂದ್ಯದಲ್ಲಿ ಈ ತಂಡ ಎಡಿಇ ಎಫ್‌ಸಿಯನ್ನು ಮಣಿಸಿತು. ಅಲ್ತಮಶ್‌ 21ನೇ ನಿಮಿಷ ಮತ್ತು 47ನೇ ನಿಮಿಷಗಳಲ್ಲಿ ಗೋಲು ಗಳಿಸಿದರು. ‘ಎ’ ಡಿವಿಷನ್‌ ಪಂದ್ಯದಲ್ಲಿ ಆರ್‌ಡಬ್ಲ್ಯುಎಫ್‌ ತಂಡ 1–0ಯಿಂದ ಅಂಚೆ ಇಲಾಖೆ ತಂಡವನ್ನು ಸೋಲಿಸಿತು. ದೀಪಕ್‌ 55ನೇ ನಿಮಿಷದಲ್ಲಿ ಗೋಲು ಗಳಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.