ಫುಟ್‌ಬಾಲ್‌: ಬಿಎಫ್‌ಸಿಗೆ ಜಯ ಬೆಂಗಳೂರು: ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ (ಬಿಎಫ್‌ಸಿ) ತಂಡ ಬಿಡಿಎಫ್‌ಎ ಆಶ್ರಯದ ಸೂಪರ್ ಡಿವಿಷನ್‌ ಲೀಗ್‌ ಫುಟ್‌ಬಾಲ್‌ ಪಂದ್ಯದಲ್ಲಿ ಗೆದ್ದಿದೆ. ಅಶೋಕನಗರದಲ್ಲಿರುವ ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಹಣಾಹಣಿಯಲ್ಲಿ ಬಿಎಫ್‌ಸಿ 4–0 ಗೋಲುಗಳಿಂದ ಬೆಂಗಳೂರು ಇಂಡಿಪೆಂಡೆಂಟ್ಸ್‌ ತಂಡವನ್ನು ಸೋಲಿಸಿತು. ಲಯನ್‌ ಅಗಸ್ಟಿನ್‌ ಏಳನೇ ನಿಮಿಷದಲ್ಲಿ ಬಿಎಫ್‌ಸಿ ಖಾತೆ ತೆರೆದರು. 13ನೇ ನಿಮಿಷದಲ್ಲಿ ಪರಾಗ್‌ ಶ್ರೀವಾಸ್‌ ಚೆಂಡನ್ನು ಗುರಿ ಮುಟ್ಟಿಸಿದರು. 60ನೇ ನಿಮಿಷದಲ್ಲಿ ಗುರುಸಿಮ್ರತ್‌ ಗಿಲ್‌ ಕಾಲ್ಚಳಕ ತೋರಿದರು. 85ನೇ ನಿಮಿಷದಲ್ಲಿ ಸಾಯಿರತ್‌ ಗೋಲು ಹೊಡೆದು ಬಿಎಫ್‌ಸಿ ಪಾಳಯದಲ್ಲಿ ಸಂತಸ ಮೇಳೈಸುವಂತೆ ಮಾಡಿದರು. ‘ಎ’ ಡಿವಿಷನ್‌ ಲೀಗ್‌ ಪಂದ್ಯದಲ್ಲಿ ಎಫ್‌ಸಿ ಡೆಕ್ಕನ್‌ ತಂಡ ಗೆದ್ದಿತು. ಈ ತಂಡ 3–0 ಗೋಲುಗಳಿಂದ ಡಿವೈಇಎಸ್‌ ಎಫ್‌ಸಿ ತಂಡವನ್ನು ಸೋಲಿಸಿತು. ವಿಜಯೀ ತಂಡದ ವಿಘ್ನೇಶ್‌ (24ನೇ ನಿಮಿಷ), ಸೂರ್ಯ (39ನೇ ನಿ.) ಮತ್ತು ವಿಕ್ರಂ (53ನೇ ನಿ.) ಚೆಂಡನ್ನು ಗುರಿ ತಲುಪಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.