ಕಿಕ್‌ ಸ್ಟಾರ್ಟ್‌ಗೆ ಗೆಲುವು ಬೆಂಗಳೂರು: ಕಿಕ್‌ ಸ್ಟಾರ್ಟ್‌ ಎಫ್‌ಸಿ ತಂಡದವರು ಬಿಡಿಎಫ್‌ಎ ಸೂಪರ್ ಡಿವಿಷನ್‌ ಫುಟ್‌ಬಾಲ್‌ ಟೂರ್ನಿಯಲ್ಲಿ ಸುಲಭ ಜಯ ಸಾಧಿಸಿತು. ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಕಿಕ್‌ ಸ್ಟಾರ್ಟ್‌ 3–0ಯಿಂದ ಸಿಐಎಲ್ ಎಫ್‌ಸಿಯನ್ನು ಮಣಿಸಿತು. ನಾಲ್ಕನೇ ನಿಮಿಷದಲ್ಲಿ ದೀಪನ್ ಗಳಿಸಿದ ಗೋಲಿನ ಮೂಲಕ ಕಿಕ್‌ ಸ್ಟಾರ್ಟ್‌ ಮುನ್ನಡೆ ಗಳಿಸಿತು. 11ನೇ ನಿಮಿಷದಲ್ಲಿ ಮೋನಿಶ್‌ ಮತ್ತು 18ನೇ ನಿಮಿಷದಲ್ಲಿ ಶೆಲ್ಟನ್‌ ಗೋಲು ಗಳಿಸಿದರು. ಆದಾಯ ತೆರಿಗೆ ಇಲಾಖೆ ಮತ್ತು ಪರಿಕ್ರಮ ತಂಡಗಳ ನಡುವಿನ ‘ಎ’ ಡಿವಿಷನ್ ಪಂದ್ಯ ಗೋಲು ರಹಿತ ಡ್ರಾದಲ್ಲಿ ಕೊನೆಗೊಂಡಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.