ಫುಟ್‌ಬಾಲ್‌: ಎಎಸ್‌ಸಿ ಜಯಭೇರಿ ಬೆಂಗಳೂರು: ಎಎಸ್‌ಸಿ ಆ್ಯಂಡ್‌ ಸೆಂಟರ್‌ ಎಫ್‌ಸಿ ತಂಡದವರು ಬೆಂಗಳೂರು ಜಿಲ್ಲಾ ಫುಟ್‌ಬಾಲ್ ಸಂಸ್ಥೆ (ಬಿಡಿಎಫ್‌ಎ) ಆಶ್ರಯದ ಸೂಪರ್‌ ಡಿವಿಷನ್‌ ಲೀಗ್‌ ಫುಟ್‌ಬಾಲ್ ಪಂದ್ಯದಲ್ಲಿ ಜಯಭೇರಿ ಮೊಳಗಿಸಿದ್ದಾರೆ. ಅಶೋಕನಗರದಲ್ಲಿರುವ ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಹಣಾಹಣಿಯಲ್ಲಿ ಎಎಸ್‌ಸಿ 6–0 ಗೋಲುಗಳಿಂದ ಸಿಐಎಲ್‌ ಎಫ್‌ಸಿ ತಂಡವನ್ನು ಪರಾಭವಗೊಳಿಸಿತು. ಈ ತಂಡದ ಎಂ.ಜಿ.ರಾಮಚಂದ್ರನ್‌ 37 ಮತ್ತು 50ನೇ ನಿಮಿಷಗಳಲ್ಲಿ ಚೆಂಡನ್ನು ಗುರಿ ಮುಟ್ಟಿಸಿದರು. ದೀಪಕ್‌ (14ನೇ ನಿಮಿಷ), ಜೊತಿನ್‌ ಸಿಂಗ್‌ (40), ಜೆರಿನ್‌ (60) ಮತ್ತು ರಾಜಕ್‌ (61ನೇ ನಿ) ಅವರು ತಲಾ ಒಮ್ಮೆ ಚೆಂಡನ್ನು ಗುರಿ ಮುಟ್ಟಿಸಿದರು. ಎಂಇಜಿ ಆ್ಯಂಡ್‌ ಸೆಂಟರ್‌ ಎಫ್‌ಸಿ ಮತ್ತು ಸೌತ್‌ ಯುನೈಟೆಡ್‌ ಎಫ್‌ಸಿ ನಡುವಣ ದಿನದ ಇನ್ನೊಂದು ಪಂದ್ಯ 1–1 ಗೋಲುಗಳಿಂದ ಡ್ರಾ ಆಯಿತು. ಸೌತ್‌ ಯುನೈಟೆಡ್‌ ತಂಡದ ರಿಜ್ವಾನ್‌ 21ನೇ ನಿಮಿಷದಲ್ಲಿ ಗೋಲು ಹೊಡೆದರು. ಎಂಇಜಿ ತಂಡದ ಹೇಮಂತ್‌ 45+1ನೇ ನಿಮಿಷದಲ್ಲಿ ಚೆಂಡನ್ನು ಗುರಿ ತಲುಪಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.