ಫುಟ್‌ಬಾಲ್‌: ಸ್ಟೂಡೆಂಟ್ಸ್‌ ಯೂನಿಯನ್‌ಗೆ ಜಯ ಬೆಂಗಳೂರು: ಒಬೆಮ್‌ ಸಂಡೆ ಜೂನಿಯರ್‌ ಗಳಿಸಿದ ಎರಡು ಗೋಲುಗಳ ನೆರವಿನಿಂದ ಸ್ಟೂಡೆಂಟ್ಸ್‌ ಯೂನಿಯನ್‌ ಎಫ್‌ಸಿ ತಂಡ ಬಿಡಿಎಫ್‌ಎ ಆಶ್ರಯದ ಸೂಪರ್‌ ಡಿವಿಷನ್‌ ಲೀಗ್‌ ಫುಟ್‌ಬಾಲ್ ಪಂದ್ಯದಲ್ಲಿ ಗೆದ್ದಿದೆ. ಅಶೋಕನಗರದಲ್ಲಿರುವ ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಹೋರಾಟದಲ್ಲಿ ಸ್ಟೂಡೆಂಟ್ಸ್‌ ಯೂನಿಯನ್‌ 3–0 ಗೋಲುಗಳಿಂದ ಜವಾಹರ ಯೂನಿಯನ್‌ ಎಫ್‌ಸಿ ತಂಡವನ್ನು ಸೋಲಿಸಿತು. ಒಬೆಮ್‌ ಅವರು 17 ಮತ್ತು 66ನೇ ನಿಮಿಷಗಳಲ್ಲಿ ಚೆಂಡನ್ನು ಗುರಿ ಮುಟ್ಟಿಸಿದರು. ಅಕ್ಷಯ್‌ 75ನೇ ನಿಮಿಷದಲ್ಲಿ ಗೋಲು ಹೊಡೆದು ಗಮನ ಸೆಳೆದರು. ದಿನದ ಇನ್ನೊಂದು ಪಂದ್ಯದಲ್ಲಿ ಎಎಸ್‌ಸಿ ಆ್ಯಂಡ್ ಸೆಂಟರ್‌ ಎಫ್‌ಸಿ 4–2 ಗೋಲುಗಳಿಂದ ಎಂಇಜಿ ಆ್ಯಂಡ್‌ ಸೆಂಟರ್‌ ಎಫ್‌ಸಿ ತಂಡದ ಎದುರು ವಿಜಯಿಯಾಯಿತು. ಎಎಸ್‌ಸಿ ತಂಡದ ಜೊತಿನ್‌ ಸಿಂಗ್‌ 52 ಮತ್ತು 60ನೇ ನಿಮಿಷಗಳಲ್ಲಿ ಕಾಲ್ಚಳಕ ತೋರಿದರು. ತ್ಯಾಗರಾಜನ್‌ (58ನೇ ನಿಮಿಷ) ಮತ್ತು ದೀಪಕ್‌ ಸಿಂಗ್‌ (67ನೇ ನಿ) ಅವರೂ ಮಿಂಚಿದರು. ಎಂಇಜಿ ತಂಡದ ನಿತಿನ್‌ 29 ಮತ್ತು 90+3ನೇ ನಿಮಿಷಗಳಲ್ಲಿ ಚೆಂಡನ್ನು ಗುರಿ ತಲುಪಿಸಿ ಸೋಲಿನ ಅಂತರ ತಗ್ಗಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.