ಫುಟ್‌ಬಾಲ್‌: ರಾಯಲ್ಸ್‌ಗೆ ಜಯ ಬೆಂಗಳೂರು: ಯು.ಬಾಬು ಗಳಿಸಿದ ಏಕೈಕ ಗೋಲಿನ ನೆರವಿನಿಂದ ರಾಯಲ್ಸ್‌ ಎಫ್‌ಸಿ ತಂಡ ಬಿಡಿಎಫ್‌ಎ ‘ಬಿ’ ಡಿವಿಷನ್‌ ಲೀಗ್‌ ಫುಟ್‌ಬಾಲ್‌ ಪಂದ್ಯದಲ್ಲಿ ಗೆದ್ದಿದೆ. ಮಂಗಳವಾರ ನಡೆದ ‘ಬಿ’ ಗುಂಪಿನ ಹೋರಾಟದಲ್ಲಿ ರಾಯಲ್ಸ್‌ 1–0 ಗೋಲಿನಿಂದ ಬಾಷ್‌ ಎಫ್‌ಸಿ ತಂಡವನ್ನು ಮಣಿಸಿತು. ಬಾಬು 41ನೇ ನಿಮಿಷದಲ್ಲಿ ಗೋಲು ಹೊಡೆದರು. ಸೌತ್‌ ಇಂಡಿಯಾ ಎಫ್‌ಸಿ ಮತ್ತು ವೆಹಿಕಲ್ಸ್‌ ಎಫ್‌ಸಿ ನಡುವಣ ಪಂದ್ಯ 1–1 ಗೋಲುಗಳಿಂದ ಸಮಬಲವಾಯಿತು. ವೆಹಿಕಲ್ಸ್‌ ತಂಡದ ಪ್ರಕಾಶ್‌ 29ನೇ ನಿಮಿಷದಲ್ಲಿ ಚೆಂಡನ್ನು ಗುರಿ ತಲುಪಿಸಿದರು. ಸೌತ್ ಇಂಡಿಯಾ ತಂಡದ ಮಹೇಶ್‌ 61ನೇ ನಿಮಿಷದಲ್ಲಿ ಗೋಲು ದಾಖಲಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.