ಫಿಫಾ ರ‍್ಯಾಂಕಿಂಗ್‌: ಕುಸಿದ ಭಾರತ ನವದೆಹಲಿ: ಎಎಫ್‌ಸಿ ಏಷ್ಯಾ ಕಪ್‌ನಲ್ಲಿ ಗುಂಪು ಹಂತದಲ್ಲೇ ಹೊರಬಿದ್ದಿದ್ದ ಭಾರತ ಫುಟ್‌ಬಾಲ್ ತಂಡ ಗುರುವಾರ ಪ್ರಕಟವಾಗಿರುವ ಫಿಫಾ ರ‍್ಯಾಂಕಿಂಗ್‌ನಲ್ಲಿ 103ನೇ ಸ್ಥಾನಕ್ಕೆ ಕುಸಿದಿದೆ. ಸುನಿಲ್‌ ಚೆಟ್ರಿ ಬಳಗ ಮೂರು ಸ್ಥಾನ ಕಳೆದುಕೊಂಡಿದೆ. ತಂಡದ ಖಾತೆಯಲ್ಲಿ ಸದ್ಯ 1219 ಪಾಯಿಂಟ್ಸ್‌ ಇವೆ. ಎಎಫ್‌ಸಿ ರ‍್ಯಾಂಕಿಂಗ್‌ನಲ್ಲಿ ತಂಡ 16ರಿಂದ 18ನೇ ಸ್ಥಾನಕ್ಕೆ ಕುಸಿತ ಕಂಡಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.