ಎಎಫ್‌ಸಿ: ಫೈನಲ್‌ಗೆ ಜಪಾನ್ ತಂಡ ಅಲ್‌ ಆಯಿನ್, ಯುಎಇ: ಇರಾನ್ ವಿರುದ್ಧ 3–0 ಗೋಲುಗಳ ಜಯ ಸಾಧಿಸಿದ ಜಪಾನ್ ತಂಡ ಎಎಫ್‌ಸಿ ಏಷ್ಯಾ ಕಪ್ ಫುಟ್‌ಬಾಲ್ ಟೂರ್ನಿಯ ಫೈನಲ್ ಪ್ರವೇಶಿಸಿತು. ಮೊದಲಾರ್ಧದಲ್ಲಿ ಉಭಯ ತಂಡಗಳಿಗೂ ಗೋಲು ಗಳಿಸಲು ಆಗಲಿಲ್ಲ. ವಿರಾಮದ ನಂತರ ಯೂಯ ಒಸಾಕೊ ಗಳಿಸಿದ ಮೂರು ಗೊಲುಗಳ ಮೂಲಕ ಜಪಾನ್ ಜಯ ಸಾಧಿಸಿತು. ಕತಾರ್ ಮತ್ತು ಆತಿಥೇಯ ಯುಎಇ ನಡುವಿನ ಎರಡನೇ ಸಮಿಫೈನಲ್‌ನಲ್ಲಿ ಗೆದ್ದ ತಂಡವನ್ನು ಜಪಾನ್ ಪ್ರಶಸ್ತಿ ಸುತ್ತಿನಲ್ಲಿ ಎದುರಿಸಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.