ಫುಟ್‌ಬಾಲ್‌: ತಿಲಕ್‌, ಬಿಟಿಎಂ ತಂಡಗಳಿಗೆ ಜಯ ಬೆಂಗಳೂರು: ತಿಲಕ್ ಮೆಮೋರಿಯಲ್‌ ಎಫ್‌ಸಿ ಮತ್ತು ಬಿಟಿಎಂ ಎಫ್‌ಸಿ ತಂಡಗಳು ಬಿಡಿಎಫ್‌ಎ ‘ಬಿ’ ಡಿವಿಷನ್‌ ಫುಟ್‌ಬಾಲ್ ಲೀಗ್ ಚಾಂಪಿಯನ್‌ಷಿಪ್‌ನಲ್ಲಿ ಭಾನುವಾರ ಜಯ ಗಳಿಸಿದವು. ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ನಡೆದ ‘ಎ’ ಗುಂಪಿನ ಪಂದ್ಯದಲ್ಲಿ ತಿಲಕ್ ಮೆಮೋರಿಯಲ್‌ ತಂಡ ಎಕ್ಸ್‌ಎಲ್‌ಆರ್ 8 ಎಫ್‌ಸಿ ವಿರುದ್ಧ 2–1 ಗೋಲುಗಳಿಂದ ಗೆದ್ದಿತು. ತಿಲಕ್‌ ಪರವಾಗಿ ಪಿ.ಸಂದೀಪ್ ಕೃಷ್ಣ 25ನೇ ನಿಮಿಷದಲ್ಲಿ ಮತ್ತು ಚಂಗಪ್ಪ 70+1ನೇ ನಿಮಿಷದಲ್ಲಿ ಗೋಲು ಗಳಿಸಿದರು. ಎದುರಾಳಿ ತಂಡಕ್ಕೆ ಪ್ರಶಾಂತ್‌ 67ನೇ ನಿಮಿಷದಲ್ಲಿ ಗೋಲು ತಂದಿತ್ತರು. ಮತ್ತೊಂದು ಪಂದ್ಯದಲ್ಲಿ ಬಿಟಿಎಂ 2–1 ಗೋಲಿನಿಂದ ಸಾಯಿ ಎಫ್‌ಸಿಯನ್ನು ಮಣಿಸಿತು. ಒಂಬತ್ತನೇ ನಿಮಿಷದಲ್ಲಿ ಯುಗಳ್ ಗಳಿಸಿದ ಗೋಲಿನ ಮೂಲಕ ಬಿಟಿಎಂ ಮುನ್ನಡೆ ಗಳಿಸಿತು. ಆದರೆ 26ನೇ ನಿಮಿಷದಲ್ಲಿ ಶ್ರೇಯಸ್ ಗೋಲು ಗಳಿಸಿ ಸಾಯಿ ತಂಡಕ್ಕೆ ಮುನ್ನಡೆ ಗಳಿಸಿಕೊಟ್ಟರು. ನರೇಶ್‌ 40ನೇ ನಿಮಿಷದಲ್ಲಿ ಚೆಂಡನ್ನು ಗುರಿ ಸೇರಿಸಿ ಬಿಟಿಎಂ ಪಾಳಯದಲ್ಲಿ ಭರವಸೆ ಮೂಡಿಸಿದರು. ನಂತರ ರಕ್ಷಣಾತ್ಮಕ ಆಟವಾಡಿದ ಈ ತಂಡ ಗೆಲುವು ತನ್ನದಾಗಿಸಿಕೊಂಡಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.