ಐಎಸ್‌ಎಲ್‌: ನಾರ್ತ್‌ಈಸ್ಟ್‌ಗೆ ಜಯ ಮುಂಬೈ: ನಾರ್ತ್‌ಈಸ್ಟ್‌ ಯುನೈಟೆಡ್‌ ಎಫ್‌ಸಿ ತಂಡದವರು ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್‌ ಪಂದ್ಯದಲ್ಲಿ ಗೆದ್ದಿದ್ದಾರೆ. ಮುಂಬೈ ಫುಟ್‌ಬಾಲ್‌ ಅರೆನಾದಲ್ಲಿ ಬುಧವಾರ ನಡೆದ ಹೋರಾಟದಲ್ಲಿ ನಾರ್ತ್‌ಈಸ್ಟ್‌ 2–0 ಗೋಲುಗಳಿಂದ ಮುಂಬೈ ಸಿಟಿ ಎಫ್‌ಸಿ ತಂಡವನ್ನು ಮಣಿಸಿತು. ಇದರೊಂದಿಗೆ ‘ಪ್ಲೇ ಆಫ್‌’ ಪ್ರವೇಶದ ಹಾದಿಯನ್ನು ಸುಗಮ ಮಾಡಿಕೊಂಡಿತು. ರೌಲಿನ್‌ ಬೊರ್ಗೆಸ್‌ (4ನೇ ನಿಮಿಷ) ಮತ್ತು ಬಾರ್ತೊಲೊಮೆವ್‌ ಒಗ್‌ಬೆಚೆ (33) ಗೋಲು ಹೊಡೆದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.