ಫುಟ್‌ಬಾಲ್‌: ಪರೋಮಿತಾ, ಪ್ರವೀಣಾ ‘ಹ್ಯಾಟ್ರಿಕ್‌’ ಬೆಂಗಳೂರು: ಪರೋಮಿತಾ ಮತ್ತು ಪ್ರವೀಣಾ ಗಳಿಸಿದ ‘ಹ್ಯಾಟ್ರಿಕ್‌’ ಗೋಲುಗಳ ನೆರವಿನಿಂದ ಬಿಯುಎಫ್‌ಸಿ ತಂಡ ಕರ್ನಾಟಕ ರಾಜ್ಯ ಮಹಿಳಾ ಫುಟ್‌ಬಾಲ್‌ ಲೀಗ್‌ (ಸೂಪರ್‌ ಡಿವಿಷನ್‌) ಪಂದ್ಯದಲ್ಲಿ ಗೆದ್ದಿದೆ. ಬುಧವಾರ ನಡೆದ ಹಣಾಹಣಿಯಲ್ಲಿ ಬಿಯುಎಫ್‌ಸಿ 8–0 ಗೋಲುಗಳಿಂದ ಮಿಸಾಕ ತಂಡವನ್ನು ಮಣಿಸಿತು. ಪರೋಮಿತಾ 18, 37 ಮತ್ತು 50ನೇ ನಿಮಿಷಗಳಲ್ಲಿ ಕಾಲ್ಚಳಕ ತೋರಿದರು. ಪ್ರವೀಣಾ 4, 45+1 ಮತ್ತು 67ನೇ ನಿಮಿಷಗಳಲ್ಲಿ ಚೆಂಡನ್ನು ಗುರಿ ಮುಟ್ಟಿಸಿದರು. ಅನೌಷ್ಕಾ (55ನೇ ನಿ.) ಮತ್ತು ಸಸ್ಮಿತಾ (81ನೇ ನಿ.) ಅವರೂ ಗೋಲು ಬಾರಿಸಿ ಗೆಲುವಿನ ಅಂತರ ಹೆಚ್ಚಿಸಿದರು. ಇನ್ನೊಂದು ಪಂದ್ಯದಲ್ಲಿ ಐಎಫ್‌ಎಫ್‌ 2–0 ಗೋಲುಗಳಿಂದ ಪರಿಕ್ರಮ ಎದುರು ಗೆದ್ದಿತು. ವಿಜಯೀ ತಂಡದ ರಸಿಗಾ ಮತ್ತು ಲಿಲಿ ಅವರು ಕ್ರಮವಾಗಿ 57 ಮತ್ತು 67ನೇ ನಿಮಿಷಗಳಲ್ಲಿ ಗೋಲು ಹೊಡೆದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.