‘ಈಗ ಆರಾಮಾಗಿದ್ದೇನೆ’ ಪ್ಯಾರಿಸ್‌: ‘ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆ ಆಗಿದ್ದು, ಈಗ ಆರಾಮಾಗಿದ್ದೇನೆ’ ಎಂದು ಬ್ರೆಜಿಲ್‌ನ ಫುಟ್‌ಬಾಲ್‌ ದಿಗ್ಗಜ ಪೆಲೆ, ಶುಕ್ರವಾರ ತಿಳಿಸಿದ್ದಾರೆ. 78 ವರ್ಷದ ಪೆಲೆ, ಮೂತ್ರದ ಸೋಂಕಿನ ಕಾರಣ ಬುಧವಾರ ಆಸ್ಪತ್ರೆಗೆ ದಾಖಲಾಗಿದ್ದರು. ‘ರೋಗ ಪ್ರತಿರೋಧಕ ಚುಚ್ಚುಮದ್ದಿಗೆ ದೇಹ ಸ್ಪಂದಿಸುತ್ತಿದೆ. ಇನ್ನು ಕೆಲ ದಿನಗಳೊಳಗೆ ಆಸ್ಪತ್ರೆಯಿಂದ ಬಿಡುಗಡೆಯಾಗುತ್ತೇನೆ’ ಎಂದು ಅವರು ಟ್ವೀಟ್‌ ಮಾಡಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.