ಫುಟ್‌ಬಾಲ್‌: ಲಕ್ಕಿ ಸ್ಟಾರ್‌ಗೆ ಜಯ ಬೆಂಗಳೂರು: ನ್ಯೂ ಲಕ್ಕಿ ಸ್ಟಾರ್‌ ಎಫ್‌ಸಿ ತಂಡ, ಬಿಡಿಎಫ್‌ಎ ‘ಸಿ’ ಡಿವಿಷನ್‌ ಲೀಗ್‌ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ನ ಭಾನು ವಾರದ ಪಂದ್ಯದಲ್ಲಿ ಗೆದ್ದಿದೆ. ‘ಸಿ’ ವಲಯದ ಹಣಾಹಣಿಯಲ್ಲಿ ಲಕ್ಕಿ ಸ್ಟಾರ್‌ 1–0 ಗೋಲಿನಿಂದ ಬೆಂಗಳೂರು ವಾರಿಯರ್ಸ್‌ ತಂಡವನ್ನು ಮಣಿಸಿತು. ಆಲ್ಬರ್ಟ್‌ 32ನೇ ನಿಮಿಷದಲ್ಲಿ ಗೋಲು ಗಳಿಸಿದರು. ವಿವೇಕಾನಂದ ಎಫ್‌ಸಿ 4–2 ಗೋಲುಗಳಿಂದ ಯಂಗ್‌ ಬಾಯ್ಸ್‌ ಎಫ್‌ಸಿ ತಂಡವನ್ನು ಪರಾಭವಗೊಳಿಸಿತು. ವಿಜಯೀ ತಂಡದ ವಿಶಾಲ್‌ 15 ಮತ್ತು 20ನೇ ನಿಮಿಷಗಳಲ್ಲಿ ಗೋಲು ಹೊಡೆದರು. ಪೃಥ್ವಿ (53) ಮತ್ತು ಅಬ್ರಾಹಂ (59) ಕೂಡಾ ಮಿಂಚಿದರು. ಕ್ವೀನ್ಸ್‌ ಸ್ಟಾರ್‌ ಎಫ್‌ಸಿ ಮತ್ತು ಫ್ರೆಂಡ್ಸ್‌ ಯುನೈಟೆಡ್‌ ಎಫ್‌ಸಿ ನಡುವಣ ಪಂದ್ಯ 2–2 ಗೋಲುಗಳಿಂದ ಡ್ರಾ ಆಯಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.