ಫುಟ್‌ಬಾಲ್‌: ಅಲೋಶಿಯಸ್‌ ಹ್ಯಾಟ್ರಿಕ್‌ ಬೆಂಗಳೂರು: ಅಲೋಶಿಯಸ್‌ ಗಳಿಸಿದ ನಾಲ್ಕು ಗೋಲುಗಳ ಬಲದಿಂದ ಎಚ್‌ಎಎಲ್‌ ತಂಡ ಬಿಡಿಎಫ್‌ಎ ’ಸಿ’ ಡಿವಿಷನ್ ಲೀಗ್ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಭರ್ಜರಿ ಜಯ ಗಳಿಸಿತು. ಅಶೋಕನಗರದ ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಈ ತಂಡ ಸದರ್ನ್ ಬ್ಲೂಸ್ ಎಫ್‌ಸಿಯನ್ನು 6–0ಯಿಂದ ಮಣಿಸಿತು. ಸೌವಿ್‌ (8ನೇ ನಿಮಿಷ), ಅಲೋಶಿಯಸ್ (25, 33, 54 ಮತ್ತು 59ನೇ ನಿ) ಹಾಗೂ ಪ್ರವೀಣ್‌ (46ನೇ ನಿ) ಗೋಲು ಗಳಿಸಿದರು. ಮತ್ತೊಂದು ಪಂದ್ಯದಲ್ಲಿ ಪಿಲ್ಲಣ್ಣ ಗಾರ್ಡನ್‌ ಎಫ್‌ಸಿ 2–0ಯಿಂದ ತ್ರಿವೇಣಿ ಎಫ್‌ಸಿಯನ್ನು ಸೋಲಿಸಿತು. ಡೇವಿಡ್‌ (26ನೇ ನಿ) ಮತ್ತು ಜಾನ್‌ (50ನೇ ನಿ) ಗೋಲು ದಾಖಲಿಸಿದರು. ರೋಷನ್‌ (49ನೇ ನಿ) ಗಳಿಸಿದ ಏಕೈಕ ಗೋಲಿನ ಬಲದಿಂದ ಧರ್ಮರಾಜ ಯೂನಿಯನ್‌ ಎಫ್‌ಸಿ 1–0ಯಿಂದ ಮಹಾರಾಜ ಸೋಷಿಯಲ್ಸ್‌ ಎಫ್‌ಸಿಯನ್ನು ಸೋಲಿಸಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.