ಫುಟ್‌ಬಾಲ್: ಕ್ರೆಸೆಂಟ್‌ ಎಫ್‌ಸಿಗೆ ಜಯ ಬೆಂಗಳೂರು: ಕ್ರೆಸೆಂಟ್‌ ತಂಡವು ಸರ್ವಜ್ಞ ನಗರ ಎಫ್‌ಸಿ ವಿರುದ್ಧ 3–0 ರಿಂದ ಜಯ ಸಾಧಿಸಿದೆ. ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ‌ಮಂಗಳವಾರ ನಡೆದ ಬಿಡಿಎಫ್‌ಎ‌ ಫುಟ್‌ಬಾಲ್‌ ಟೂರ್ನಿಯಲ್ಲಿ ಸ್ಯಾಂಕಿ, ಅಲ್ಫಜ್, ಆಲೀನ್ ಅವರ ಗೋಲುಗಳಿಂದ ಕ್ರೆಸೆಂಟ್ ಗೆದ್ದಿತು. ಲಾ ಮೆಸಿಯ ಎಫ್‌ಸಿ ತಂಡ, ಜೆ.ಪಿ.ಸ್ಪೋರ್ಟ್ಸ್ ತಂಡವನ್ನು 6–0ರಿಂದ ಮಣಿಸಿತು. ರಂಜನ್‌, ಕರಣ್‌, ಇಮಾನುಲ್ಲಾ, ವಿಶಾಲ್‌, ಅಜಯ್‌ ಗೋಲು ಗಳಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.