ರೋನಾಲ್ಡೊಗೆ ₹ 16 ಕೋಟಿ ದಂಡ ಲಾಸೆನ್: ಫುಟ್‌ಬಾಲ್ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ ಅವರಿಗೆ ₹ 16 ಕೋಟಿ (20 ಸಾವಿರ ಯುರೊ) ದಂಡ ವಿಧಿಸಲಾಗಿದೆ. ಹೋದ ವಾರ ನಡೆದಿದ್ದ ಚಾಂಪಿಯನ್ಸ್‌ ಲೀಗ್ ಪಂದ್ಯದಲ್ಲಿ ಯುವೆಂಟಿಸ್ ತಂಡದ ರೋನಾಲ್ಡೊ ಅವರು ಅಟ್ಲೆಟಿಕೊ ಮ್ಯಾಡ್ರಿಡ್ ತಂಡದ ಕೋಚ್ ಡೀಗೊ ಸಿಮಿಯೊನ್ಸ್‌ ಅವರನ್ನು ಅಣಕಿಸಿದ್ದಕ್ಕಾಗಿ ಈ ದಂಡ ವಿಧಿಸಲಾಗಿದೆ. ಅರ್ಜೆಂಟೀನಾ ಮೂಲದ ಸಿಮಿಯೊನ್ ಅವರಿಗೂ ಅಶಿಸ್ತು ಪ್ರದರ್ಶಿಸಿದ ಕಾರಣಕ್ಕಾಗಿ ₹ 15.60 ಕೋಟಿ ದಂಡವನ್ನು ಯುನೈಟೆಡ್ ಯುರೋಪಿಯನ್ ಫುಟ್‌ಬಾಲ್ ಒಕ್ಕೂಟವು ವಿಧಿಸಿದೆ. 34 ವರ್ಷದ ರೊನಾಲ್ಡೊ ಅವರು ಯುವೆಂಟಿಸ್ ಪರ 24 ಗೋಲು ಗಳಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.