ಸೂಪರ್ ಕಪ್ ಫುಟ್‌ಬಾಲ್ ಟೂರ್ನಿ ಇಂದಿನಿಂದ ಭುವನೇಶ್ವರ್: ದೇಶದ ಪ್ರಮುಖ ಫುಟ್‌ಬಾಲ್ ಟೂರ್ನಿಗಳಲ್ಲಿ ಒಂದಾಗಿರುವ ಸೂಪರ್ ಕಪ್‌ನ ನಾಕೌಟ್‌ ಪಂದ್ಯಗಳು ಶುಕ್ರವಾರದಿಂದ ಇಲ್ಲಿ ನಡೆಯಲಿವೆ. 16ರ ಘಟ್ಟದ ಮೊದಲ ಪಂದ್ಯದಲ್ಲಿ ಚೆನ್ನೈಯಿನ್ ಎಫ್‌ಸಿ ಮತ್ತು ಮುಂಬೈ ಸಿಟಿ ಎಫ್‌ಸಿ ತಂಡಗಳು ಸೆಣಸಲಿವೆ. ಐ ಲೀಗ್‌ನಲ್ಲಿ ಪಾಲ್ಗೊಂಡ ಎಂಟು ತಂಡಗಳಿಗೆ ಸಂಬಂಧಿಸಿದ ಕ್ಲಬ್‌ಗಳು ಬಹಿಷ್ಕಾರ ಹಾಕಲು ನಿರ್ಧರಿಸಿದ ಕಾರಣ ಈ ಬಾರಿ ಸೂಪರ್ ಕಪ್ ಟೂರ್ನಿ ನಡೆಯುತ್ತದೆಯೋ ಇಲ್ಲವೋ ಎಂಬುದರ ಬಗ್ಗೆ ಅನುಮಾನ ಮೂಡಿತ್ತು. ದೇಶಿ ಟೂರ್ನಿಯಲ್ಲಿ ಅನುಸರಿಸುವ ಮಾದರಿಯನ್ನು ಪರಿಷ್ಕರಿಸುವಂತೆ ಒತ್ತಾಯಿಸಿ ಈ ಕ್ಲಬ್‌ಗಳು ಬಹಿಷ್ಕಾರಕ್ಕೆ ಮುಂದಾಗಿದ್ದವು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.