ಯುವ ಬಾಕ್ಸಿಂಗ್: ಭಾರತದ 6 ಮಂದಿ ಸೆಮಿಫೈನಲ್‌ಗೆ ಉಲಾನ್‌ಬತಾರ್‌, ಮಂಗೋಲಿಯಾ: ಏಷ್ಯನ್‌ ಯೂತ್‌ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಆರು ಮಂದಿ ಬಾಕ್ಸಿಂಗ್‌ ಪಟುಗಳು ಬುಧವಾರ ಸೆಮಿಫೈನಲ್‌ಗೆ ಮುನ್ನಡೆದರು. ಆ ಮೂಲಕ ಇನ್ನಷ್ಟು ಪದಕಗಳನ್ನು ಗೆಲ್ಲುವುದು ಖಚಿತವಾಗಿದೆ. ಸೊಯ್‌ ಸೆಲಯ್‌ (49 ಕೆ.ಜಿ), ಅಮನ್‌ (+91 ಕೆ.ಜಿ), ಅಂಕಿತ್‌ ನರ್ವಾಲ್‌ (60 ಕೆ.ಜಿ), ನೊರೆಮ್‌ ಚಾನು (51 ಕೆ.ಜಿ), ಜಾಸ್ಮಿನ್‌ (57 ಕೆ.ಜಿ) ಮತ್ತು ವಿಂಕಾ (64 ಕೆ.ಜಿ) ಸೆಮಿಫೈನಲ್‌ ತಲುಪಿದವರು. ನೇಹಾ ಕಾಸ್ನಿಯಾಲ್‌ (60 ಕೆ.ಜಿ) ಮತ್ತು ರೋಹಿತ್‌ ಮೊರ್‌ (52 ಕೆ.ಜಿ) ಎಂಟರ ಘಟ್ಟದ ಹೋರಾಟಗಳಲ್ಲಿ ಎದುರಾಳಿಗಳಿಗೆ ಮಣಿದರು. ಸೆಲಯ್‌, ಫಿಲಿಪೀನ್ಸ್‌ನ ಫ್ಲಿಂಟ್‌ ಜಾರಾ ವಿರುದ್ಧ 5–0ಯಿಂದ, ಅಮನ್‌, ತೈವಾನ್‌ನ ಕೈ– ಸುಂಗ್‌ ವಿರುದ್ಧ, ನರ್ವಾಲ್‌ 5–0 ಯಿಂದ ತೈವಾನ್‌ನ ಯು ಲಿನ್‌ ವಿರುದ್ಧ ಜಯಗಳಿಸಿದರು. ಮಹಿಳೆಯರ ವಿಭಾಗದಲ್ಲಿ ಚಾನು 5–0 ಯಿಂದ ಕೊರಿಯಾ ಯುನ್ಸ ಸುನ್‌ ವಿರುದ್ಧ ಸುಲಭ ಜಯ ಪಡೆದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.