ಫುಟ್‌ಬಾಲ್ ಆಟಗಾರ ಮೆಕ್‌ನೀಲ್ ನಿಧನ ಲಂಡನ್‌: ಸ್ಕಾಟ್ಲೆಂಡ್‌ನ ಹಿರಿಯ ಫುಟ್‌ಬಾಲ್ ಆಟಗಾರ ಬಿಲ್ಲಿ ಮೆಕ್‌ನೀಲ್ (79) ಸೋಮವಾರ ರಾತ್ರಿ ನಿಧನರಾದರು.ಮರೆವು, ಬುದ್ದಿಮಾಂದ್ಯತೆಯಿಂದ ಅವರು ಬಳಲುತ್ತಿದ್ದರು. ಸೆಲ್ಟಿಕ್‌ನ‘ಸೀಸರ್‌’ ಎಂದೇ ಹೆಸರು ಪಡೆದಿದ್ದ ಬಿಲ್ಲಿ ಅವರ ನಾಯಕತ್ವದಲ್ಲಿಸೆಲ್ಟಿಕ್‌ನ ‘ಲಿಸ್ಬನ್ ಲಯನ್ಸ್’ ತಂಡ 1967ರಲ್ಲಿ ಯೂರೋಪಿಯನ್‌ ಕಪ್‌ ಗೆದ್ದಿತ್ತು. 790 ಪಂದ್ಯ‌ ಮುನ್ನಡೆಸಿ ನಿವೃತ್ತಿ ಪಡೆದ ನಂತರ ತಂಡದ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.