ಫಿಫಾ: ಭಾರತದ ಸ್ಥಾನ ಸ್ಥಿರ ನವದೆಹಲಿ: ಭಾರತ ಫುಟ್‌ಬಾಲ್‌ ತಂಡ ಫಿಫಾ ಕ್ರಮಾಂಕದಲ್ಲಿ 101ನೇ ಸ್ಥಾನದಲ್ಲಿ ಮುಂದುವರಿದಿದೆ. ಇತ್ತೀಚೆಗೆ ಥಾಯ್ಲೆಂಡ್‌ನಲ್ಲಿ ನಡೆದ ಕಿಂಗ್ಸ್ ಕಪ್‌ ಟೂರ್ನಿಯಲ್ಲಿ ಸುನಿಲ್‌ ಚೆಟ್ರಿ ಪಡೆಮೂರನೇ ಸ್ಥಾನ ಗಳಿಸಿತ್ತು. ಆರಂಭದ ಪಂದ್ಯದಲ್ಲಿ ಕ್ಯುರಸೊವ್‌ ಎದುರು 1–3ರಿಂದ ಸೋತಿತ್ತು. ನಂತರ ಆತಿಥೇಯ ಥಾಯ್ಲೆಂಡ್‌ ತಂಡವನ್ನು 1–0ರಿಂದ ಮಣಿಸಿತ್ತು. ಈ ಫಲಿತಾಂಶದಿಂದ ಭಾರತದ ಕ್ರಮಾಂಕ ದಲ್ಲಿ ಬದಲಾವಣೆಯಾಗಿಲ್ಲ. ಸದ್ಯ ತಂಡದ ಬಳಿ 1219 ಪಾಯಿಂಟ್‌ಗಳಿವೆ. ಏಷ್ಯಾ ಫೆಡರೇಷನ್‌ ಪೈಕಿ ಇರಾನ್‌ (20), ಜಪಾನ್‌ (28), ಕೊರಿಯಾ (37), ಆಸ್ಟ್ರೇಲಿಯಾ (43) ಹಾಗೂ ಕತಾರ್‌ (55)ಅಗ್ರ ಐದು ಸ್ಥಾನಗಳಲ್ಲಿವೆ. ಭಾರತ 18ನೇ ಸ್ಥಾನದಲ್ಲಿದೆ.ಒಟ್ಟಾರೆ ಬೆಲ್ಜಿಯಂ ಮೊದಲ ಸ್ಥಾನದಲ್ಲಿದ್ದರೆ ಫ್ರಾನ್ಸ್, ಬ್ರೆಜಿಲ್‌ ಹಾಗೂ ಇಂಗ್ಲೆಂಡ್‌ ನಂತರದ ಸ್ಥಾನಗಳಲ್ಲಿವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.