ಕ್ವಾರ್ಟರ್‌ಫೈನಲ್‌ಗೆ ಸಾನಿಯಾ– ಕ್ರಿಸ್ಟಿನಾ ಕ್ಲೀವ್‌ಲ್ಯಾಂಡ್‌, ಅಮೆರಿಕ : ಭಾರತದ ಸಾನಿಯಾ ಮಿರ್ಜಾ ಹಾಗೂ ಅಮೆರಿಕದ ಕ್ರಿಸ್ಟಿನಾ ಮೆಕಾಲೆ ಜೋಡಿಯು ಕ್ಲೀವ್‌ಲ್ಯಾಂಡ್‌ ಟೆನಿಸ್‌ ಚಾಂಪಿಯನ್‌ಷಿಪ್‌ನ ಕ್ವಾರ್ಟರ್‌ಫೈನಲ್ ತಲುಪಿದ್ದಾರೆ. ಭಾನುವಾರ ರಾತ್ರಿ ಇಲ್ಲಿ ನಡೆದ ಮಹಿಳಾ ಡಬಲ್ಸ್ ಪ್ರೀಕ್ವಾರ್ಟರ್‌ಫೈನಲ್‌ನಲ್ಲಿ ಈ ಜೋಡಿಯು 6-3 6-2ರಿಂದ ಜಾರ್ಜಿಯಾದ ಒಕ್ಸಾನಾ ಕಲಾಶ್ನಿಕೊವಾ ಮತ್ತು ರುಮೇನಿಯಾದ ಆ್ಯಂಡ್ರಿಯಾ ಮಿಟು ಜೋಡಿಯನ್ನು ಪರಾಭವಗೊಳಿಸಿದರು. ಭಾರತ ಮತ್ತು ಅಮೆರಿಕ ಆಟಗಾರ್ತಿಯರು ಎರಡೂ ಸೆಟ್‌ಗಳಲ್ಲಿ ಸಂಪೂರ್ಣ ಪಾರಮ್ಯ ಮೆರೆದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.