| ಚಿನ್ನವಿಲ್ಲ, ಕನಿಷ್ಠ ಕಂಚಿನ ಪದಕ ಗೆಲ್ಲಲಾಗದ ಜೊಕೊವಿಚ್! ಟೋಕಿಯೊ: ಜಪಾನ್‌ನಲ್ಲಿ ಸಾಗುತ್ತಿರುವ ಒಲಿಂಪಿಕ್ಸ್‌ನ ಟೆನಿಸ್ ಕ್ರೀಡೆಯಲ್ಲಿ ಚಿನ್ನ ಗೆಲ್ಲುವ ನೆಚ್ಚಿನ ತಾರೆಗಳಲ್ಲಿ ಓರ್ವರೆನಿಸಿರುವ ಸರ್ಬಿಯಾದ ನೊವಾಕ್ ಜೊಕೊವಿಚ್ ಅವರಿಗೆ ಕನಿಷ್ಠ ಕಂಚಿನ ಪದಕ ಗೆಲ್ಲಲು ಸಾಧ್ಯವಾಗಲಿಲ್ಲ. ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಶನಿವಾರ ನಡೆದ ಕಂಚಿನ ಪದಕದ ಸೆಣಸಾಟದಲ್ಲಿ ವಿಶ್ವದ ಅಗ್ರ ಶ್ರೇಯಾಂಕಿತ ಜೊಕೊವಿಚ್, ಸ್ಪೇನ್‌ನ ಪಾಬ್ಲೊ ಕರೆನೊ ಬುಸ್ಟಾ ವಿರುದ್ದ 6-4 6-7(6) 6-3ರ ಅಂತರದಲ್ಲಿ ಸೋಲು ಅನುಭವಿಸಿದರು. ಇದನ್ನೂ ಓದಿ: : ಜೊಕೊವಿಚ್‌ ಚಿನ್ನದ ಕನಸು ಭಗ್ನ 2 & 47 . 6 . . 👏#Tokyo2020 # # ../JXOy0NrGpA ಈ ಮೊದಲು ಸೆಮಿಫೈನಲ್‌ನಲ್ಲಿ ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೆವ್‌ ವಿರುದ್ಧ ಶರಣಾಗಿರುವ ಜೊಕೊವಿಚ್ ಅವರ ‘ಗೋಲ್ಡನ್‌ ಗ್ರ್ಯಾನ್‌ಸ್ಲಾಮ್‌’ ಕನಸು ಭಗ್ನಗೊಂಡಿತ್ತು. ಈಗ ಮಿಶ್ರ ಡಬಲ್ಸ್‌ನಲ್ಲಿ ಜೊಕೊವಿಚ್‌ಗೆ ಪದಕ ಗೆಲ್ಲುವ ಕೊನೆಯ ಅವಕಾಶವಿದೆ. ಇಂದೇ ಜೊಕೊವಿಚ್ ಹಾಗೂ ನೀನಾ ಸ್ಟೊಜಾನೊವಿಚ್‌ ಜೋಡಿ ಕಂಚಿನ ಪದಕಕ್ಕಾಗಿ ಹೋರಾಡಲಿದ್ದಾರೆ. . 🇪🇸 @pablocarreno91 . 1 & 2 #Tokyo2020 ' 🥉# # ../uCDQ4FLHI7 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.