: ಟೆನಿಸ್‌: ಭಾರತದ ಸವಾಲು ಅಂತ್ಯ ಟೋಕಿಯೊ: ಈ ಬಾರಿಯ ಒಲಿಂಪಿಕ್ಸ್‌ನ ಟೆನಿಸ್‌ ಸ್ಪರ್ಧೆಯಲ್ಲಿ ಭಾರತದ ಸವಾಲು ಅಂತ್ಯಕಂಡಿದೆ. ಸಾನಿಯಾ ಮಿರ್ಜಾ ಹಾಗೂ ಸುಮಿತ್‌ ನಗಾಲ್‌, ಮಿಶ್ರ ಡಬಲ್ಸ್‌ನಲ್ಲಿ ಕಣಕ್ಕಿಳಿಯಬಹುದೆಂಬ ನಿರೀಕ್ಷೆ ಇತ್ತು. ಅದು ಹುಸಿಯಾಯಿತು. ಭಾರತದ ಜೋಡಿ ರ‍್ಯಾಂಕಿಂಗ್‌ನಲ್ಲಿ 153ನೇ ಸ್ಥಾನದಲ್ಲಿದ್ದ ಕಾರಣ ಅವಕಾಶ ಸಿಗಲಿಲ್ಲ. ಈ ವಿಭಾಗದಲ್ಲಿ ಒಟ್ಟು 16 ಜೋಡಿ ಪದಕಕ್ಕಾಗಿ ಹೋರಾಡಲಿದೆ. ರ‍್ಯಾಂಕಿಂಗ್‌ನಲ್ಲಿ 50 ರಿಂದ 60ರೊಳಗೆ ಸ್ಥಾನ ಹೊಂದಿದ್ದವರು ಅರ್ಹತೆ ಗಳಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.