ಅಮೆರಿಕ ಓಪನ್‌: ಎರಡನೇ ಸುತ್ತಿಗೆ ಹಲೆಪ್‌ ನ್ಯೂಯಾರ್ಕ್‌: ಎರಡು ಬಾರಿಯ ಗ್ರ್ಯಾಂಡ್‌ಸ್ಲಾಮ್ ಚಾಂಪಿಯನ್‌ ಸಿಮೊನಾ ಹಲೆಪ್ ಅವರು ಅಮೆರಿಕ ಓಪನ್ ಟೆನಿಸ್‌ ಟೂರ್ನಿಯಲ್ಲಿ ಎರಡನೇ ಸುತ್ತಿಗೆ ಕಾಲಿಟ್ಟಿದ್ದಾರೆ. ಸೋಮವಾರ ಮಹಿಳಾ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನ ಹಣಾಹಣಿಯಲ್ಲಿ ರುಮೇನಿಯಾದ ಆಟಗಾರ್ತಿ 6-4, 7-6 (7/3)ರಿಂದ ಇಟಲಿಯ ಕ್ಯಾಮಿಲಾ ಜಿಯೊರ್ಗಿ ಅವರನ್ನು ಸೋಲಿಸಿದರು. ಮುಂದಿನ ಸುತ್ತಿನಲ್ಲಿ ಅವರು ಸ್ಲೊವೇಕಿಯಾದ ಕ್ರಿಸ್ಟಿನಾ ಕುಸೊವಾ ಎದುರು ಸೆಣಸುವರು. ಮತ್ತೊಂದು ಪಂದ್ಯದಲ್ಲಿ ಕ್ರಿಸ್ಟಿನಾ 7-5, 6-1ರಿಂದ ಅಮೆರಿಕದ ಆ್ಯನ್‌ ಲೀ ಅವರನ್ನು ಪರಾಭವಗೊಳಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.