ಕ್ಯಾಮರೂನ್‌ ಜಯಭೇರಿ ಪ್ಯಾರಿಸ್‌: ಅಜಾರಾ ಎನ್‌ಕೌಟ್‌ ಅವರು ಪಂದ್ಯದ ಕೊನೆಯ ಹಂತದಲ್ಲಿ ಗಳಿಸಿದ ಗೋಲಿನ ನೆರವಿನಿಂದ ಕ್ಯಾಮರೂನ್‌ ತಂಡ ನ್ಯೂಜಿಲೆಂಡ್‌ ತಂಡವನ್ನು 2–1ರಿಂದ ಮಣಿಸಿ ಮಹಿಳಾ ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿಯ ಪ್ರಿಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟಿತು. ಹೆಚ್ಚುವರಿ ಐದು ನಿಮಿಷಗಳ ಅವಧಿ ಮುಗಿಯಲು 10 ಸೆಕೆಂಡುಗಳು ಉಳಿದಿರುವಂತೆ ಚೆಂಡು ಗೋಲು ಪೆಟ್ಟಿಗೆಗೆ ಸೇರಿಸಿದ ಎನ್‌ಕೌಟ್ ಅವರು ಕ್ಯಾಮರೂನ್‌ ಪಡೆಯಲ್ಲಿ ಹರ್ಷದ ಹೊನಲು ಹರಿಸಿದರು. ಕ್ಯಾಮರೂನ್‌ ತಂಡಕ್ಕೆ 57ನೇ ನಿಮಿಷದಲ್ಲೇ ಎನ್‌ಕೌಟ್‌ ಗೋಲು ಗಳಿಸಿ ಮುನ್ನಡೆ ತಂದುಕೊಟ್ಟಿದ್ದರು. ನ್ಯೂಜೆಲೆಂಡ್‌ ಪರ ಔರೆಲ್ಲಾ ಅವೊನಾ 80ನೇ ನಿಮಿಷದಲ್ಲಿ ಗೋಲು ಗಳಿಸಿ ಸಮಬಲ ತಂದಿದ್ದರು. ಆದರೆ ಆ ತಂಡಕ್ಕೆ ಸೋಲು ತಪ್ಪಲಿಲ್ಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.