ಸಾನಿಯಾಗೆ ಒಸ್ಟ್ರಾವ ಟೂರ್ನಿ ಕಿರೀಟ ಒಸ್ಟ್ರಾವ, ಜೆಕ್‌ ಗಣರಾಜ್ಯ : ಭಾರತದ ಟೆನಿಸ್‌ ತಾರೆ ಸಾನಿಯಾ ಮಿರ್ಜಾ ಅವರು ಒಸ್ಟ್ರಾವ ಓಪನ್ ಟೂರ್ನಿಯಲ್ಲಿ ಪ್ರಶಸ್ತಿಗೆ ಮುತ್ತಿಟ್ಟಿದ್ದಾರೆ. ಚೀನಾದ ಶುಯಿ ಜಾಂಗ್‌ ಜೊತೆಗೂಡಿದ ಅವರು ಮಹಿಳೆಯರ ಡಬಲ್ಸ್ ಫೈನಲ್‌ನಲ್ಲಿ ಕೈಟ್ಲಿನ್ ಕ್ರಿಸ್ಟಿಯನ್ ಮತ್ತು ಎರಿನ್‌ ರೌಟ್‌ಲಿಫ್‌ ಅವರನ್ನು ಸೋಲಿಸಿದರು. ಸಾನಿಯಾ ಅವರಿಗೆ ಈ ವರ್ಷದಲ್ಲಿ ಒಲಿದ ಮೊದಲ ಪ್ರಶಸ್ತಿ ಇದು. ಒಂದು ತಾಸು ನಾಲ್ಕು ನಿಮಿಷಗಳ ಕಾಲ ನಡೆದ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಭಾರತ– ಚೀನಾ ಜೋಡಿಯು 6-3, 6-2ರಿಂದ ಅಮೆರಿಕದ ಕೈಟ್ಲಿನ್‌ ಮತ್ತು ನ್ಯೂಜಿಲೆಂಡ್‌ನ ಎರಿನ್ ಎದುರು ಗೆದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.