ಇಂಡಿಯನ್‌ ವೆಲ್ಸ್: ಜಾನ್‌–ಫಿಲಿಪ್‌ಗೆ ಡಬಲ್ಸ್ ಗರಿ ಇಂಡಿಯನ್‌ ವೆಲ್ಸ್: ಆಸ್ಟ್ರೇಲಿಯಾದ ಜಾನ್ ಪೀಯರ್ಸ್‌ ಹಾಗೂ ಸ್ಲೊವೇಕಿಯಾದ ಫಿಲಿಪ್ ಪೊಲಾಸೆಕ್ ಅವರು ಇಂಡಿಯನ್ ವೆಲ್ಸ್ ಟೆನಿಸ್ ಟೂರ್ನಿಯ ಪುರುಷರ ಡಬಲ್ಸ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಭಾನುವಾರ ನಡೆದ ಫೈನಲ್‌ ಪಂದ್ಯದಲ್ಲಿ ಈ ಆಟಗಾರರು 6-3 7-6(1)ರಿಂದ ರಷ್ಯಾದ ಅಸ್ಲನ್ ಕರಾತ್ಸೆವ್ ಮತ್ತು ಆ್ಯಂಡಿ ರುಬ್ಲೆವ್ ಅವರನ್ನು ಮಣಿಸಿದರು. ಮೊದಲ ಸೆಟ್‌ನಲ್ಲಿ ಸುಲಭವಾಗಿ ಗೆದ್ದ ಆಸ್ಟ್ರೇಲಿಯಾ –ಸ್ಲೊವೇಕಿಯಾ ಜೋಡಿಯು ಎರಡನೇ ಸೆಟ್‌ನಲ್ಲಿ ಸ್ವಲ್ಪ ಪ್ರತಿರೋಧ ಎದುರಿಸಿದರು. ಮಹಿಳಾ ಡಬಲ್ಸ್‌ ಪ್ರಶಸ್ತಿಯು ತೈವಾನ್‌ನ ಶೇ ಸು ವೇ ಹಾಗೂ ಬೆಲ್ಜಿಯಂನ ಎಲಿಸ್ ಮರ್ಟೆನ್ಸ್ ಅವರ ಪಾಲಾಯಿತು. ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಈ ಜೋಡಿಯು 7–6 (1), 6–3ರಿಂದ ರಷ್ಯಾದ ಕುದರ್ಮೊತೆವಾ ಮತ್ತು ಕಜಕಸ್ತಾನದ ಎಲೆನಾ ರಿಬಾಕಿನಾ ಅವರನ್ನು ಸೋಲಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.