ಸೋಂಕು ಇದ್ದಾಗ ಪ್ರತ್ಯೇಕವಾಸಕ್ಕೆ ಹೋಗದಿರುವುದು ’ಲೋಪ’; ಒಪ್ಪಿಕೊಂಡ ನೊವಾಕ್! ಮೆಲ್ಬರ್ನ್: ಕಳೆದ ತಿಂಗಳು ಸುದ್ದಿಪತ್ರಿಕೆಯೊಂದಕ್ಕೆ ಸಂದರ್ಶನ ಮತ್ತು ಫೋಟೊ ಶೂಟ್ ಮಾಡುವ ಸಂದರ್ಭದಲ್ಲಿ ತಮಗೆ ಕೋವಿಡ್ ದೃಢಪಟ್ಟಿರುವುದು ಟೆನಿಸ್ ತಾರೆ ನೋವಾಕ್ ಜೊಕೊವಿಚ್ ಅವರಿಗೆ ಗೊತ್ತಿತ್ತಂತೆ! ನೊವಾಕ್ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಪೋಸ್ಟ್ ಮಾಡಿರುವ ಹೇಳಿಕೆಯಲ್ಲಿ, ತಮ್ಮ ನೆರವು ಸಿಬ್ಬಂದಿಯಿಂದ ಆದ ಅಚಾತುರ್ಯ ಇದು ಎಂದಿದ್ದಾರೆ. ಆಸ್ಟ್ರೇಲಿಯಾ ಓಪನ್ ಆಡಲು ಬರುವ ಎರಡು ವಾರಗಳ ಮುನ್ನದ ಅವಧಿಯಲ್ಲಿ ತಾವು ಪ್ರಯಾಣ ಮಾಡಿದ ಮಾಹಿತಿಗಳನ್ನು ಒದಗಿಸುವಲ್ಲಿ ನೆರವು ಸಿಬ್ಬಂದಿಯಿಂದ ಲೋಪವಾಗಿದೆ ಎಂದಿದ್ದಾರೆ. ಹೋದ ತಿಂಗಳು ತಮಗೆ ಕೋವಿಡ್ ಆಗಿದ್ದನ್ನು ಈ ಸಂದರ್ಭದಲ್ಲಿ ಒಪ್ಪಿಕೊಂಡಿದ್ದಾರೆ. ಸೋಂಕಿನಲ್ಲಿ ಪ್ರತ್ಯೇಕವಾಸದಲ್ಲಿ ಉಳಿದಿಕೊಳ್ಳದೇ ಇರುವುದು ತಪ್ಪು ಎಂದಿದ್ದಾರೆ. ಸರ್ಬಿಯಾದ ನೊವಾಕ್ ಕೋವಿಡ್ ತಡೆ ಲಸಿಕೆಯನ್ನು ತೆಗೆದುಕೊಂಡಿಲ್ಲ. ಅವರು ಆಸ್ಟ್ರೇಲಿಯಾಗೆ ಬಂದಿಳಿದಾಗ ಲಸಿಕೆ ಪಡೆದುಕೊಳ್ಳಲು ನಿರಾಕರಿಸಿದರು. ಅಲ್ಲದೇ ಅವರು ಮೆಲ್ಬರ್ನ್‌ಗೆ ಬರಲು ವೀಸಾ ಕೊಡಲು ಕೂಡ ಆಸ್ಟ್ರೇಲಿಯಾ ಸರ್ಕಾರ ಹಿಂದೇಟು ಹಾಕಿತ್ತು. ಇದೀಗ ವಿವಾದಕ್ಕೆ ಕಾರಣವಾಗಿದೆ. ಇವನ್ನೂ ಓದಿ *‘ಜೊಕೊವಿಚ್‌ ಪ್ರವೇಶ ಖಚಿತ ಇರಲಿಲ್ಲ’: ಆಸ್ಟ್ರೇಲಿಯಾ ಸರ್ಕಾರ ಹೇಳಿಕೆ *ನ್ಯಾಯದಂಗಣದಲ್ಲಿ ಜೊಕೊವಿಚ್‌ಗೆ ಗೆಲುವು ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.