ಎಐಟಿಎ ಟೆನಿಸ್‌ ಟೂರ್ನಿ: ಕೌಶಿಕ್‌, ಅರ್ಜಾನ್‌ಗೆ ಪ್ರಶಸ್ತಿ ಬೆಂಗಳೂರು: ಉತ್ತಮ ಆಟವಾಡಿದ ಕೌಶಿಕ್ ರಾಜೇಶ್ ಮತ್ತು ಅರ್ಜಾನ್‌ ಖೊರಾಕಿವಾಲ ಅವರು ಎಐಟಿಎ ಸಿಎಸ್‌7 14 ವರ್ಷದೊಳಗಿನವರ ಟೆನಿಸ್‌ ಟೂರ್ನಿಯಲ್ಲಿ ಕ್ರಮವಾಗಿ ಬಾಲಕರ ಮತ್ತು ಬಾಲಕಿಯರ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡರು. ಮುರುಗನ್‌ ಟೆನಿಸ್‌ ಅಕಾಡೆಮಿಯಲ್ಲಿ ನಡೆದ ಟೂರ್ನಿಯ ಬಾಲಕರ ವಿಭಾಗದಲ್ಲಿ ಕೌಶಿಕ್4-6, 6-4, 6-4ರಿಂದ ಶ್ರೀಕರ್ ಧೋನಿ ಸವಾಲು ಮೀರಿದರು. ಬಾಲಕಿಯರ ವಿಭಾಗದ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಅರ್ಜಾನ್‌6-3, 6-3ರಿಂದ ದಿಶಾ ಕುಮಾರ್‌ ಅವರನ್ನು ಸೋಲಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.