ಟೆನಿಸ್‌: ಕ್ರಿಶ್ ತ್ಯಾಗಿಗೆ ಪ್ರಶಸ್ತಿ ಬೆಂಗಳೂರು: ಕರ್ನಾಟಕದ ಕ್ರಿಶ್ ತ್ಯಾಗಿ ಅವರು ಇಂದೋರ್‌ನಲ್ಲಿ ನಡೆದ ಐಟಿಎಫ್‌ 18 ವರ್ಷದೊಳಗಿನವರ ಟೆನಿಸ್‌ ಟೂರ್ನಿಯ ಬಾಲಕರ ಸಿಂಗಲ್ಸ್ ವಿಭಾಗದಲ್ಲಿ ಪ್ರಶಸ್ತಿ ಜಯಿಸಿದ್ದಾರೆ. ಶನಿವಾರ ನಡೆದ ಫೈನಲ್‌ನಲ್ಲಿ ಕ್ರಿಶ್‌6-1, 2-6, 6-4ರಿಂದ ದಕ್ಷ್ ಅಗರವಾಲ್ ಅವರನ್ನು ಸೋಲಿಸಿದರು. ಸೋಲ್ ಸ್ಪೋರ್ಟ್ಸ್ ಅಕಾಡೆಮಿಯ ಕ್ರಿಶ್‌ ಅವರು ಪ್ರಜ್ವಲ್ ತಿವಾರಿ ಅವರೊಂದಿಗೆ ಡಬಲ್ಸ್‌ನಲ್ಲಿ ರನ್ನರ್ ಅಪ್ ಆದರು. ಫೈನಲ್ ಪಂದ್ಯದಲ್ಲಿ ಈ ಜೋಡಿಯು6-2, 5-7, 4-10ರಿಂದ ದೀಪ್ ಮುನಿಮ್‌ ಮತ್ತು ಡೆನಿಮ್ ಯಾದವ್ ಎದುರು ಸೋತರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.