ಲಸಿಕೆ ತೆಗೆದುಕೊಳ್ಳದ ನೊವಾಕ್‌, ವ್ಯಾಕ್ಸಿನ್‌ ಕಂಪನಿಯ ಶೇ 80ರಷ್ಟು ಷೇರುಗಳ ಒಡೆಯ ಮೆಲ್ಬರ್ನ್: ಸರ್ಬಿಯಾದ ಟೆನಿಸ್ ಆಟಗಾರ ನೊವಾಕ್ ಜೊಕೊವಿಚ್, ಲಸಿಕೆ ತಯಾರಿಸುವ ಕಂಪನಿಯಲ್ಲೇ ಶೇ 80ರಷ್ಟುಷೇರು ಹೊಂದಿದ್ದಾರೆ. ಲಸಿಕೆ ಹಾಕಿಸಿಕೊಳ್ಳದೆ ಆಸ್ಟ್ರೇಲಿಯಾ ಪ್ರವೇಶಿಸಿ, ವೀಸಾ ರದ್ಧತಿಯಿಂದಾಗಿ ಸುದ್ದಿಯಾಗಿದ್ದ ನೋವಾಕ್ ಮತ್ತು ಅವರ ಪತ್ನಿ ಇಬ್ಬರೂ ಲಸಿಕೆ ಕಂಪನಿಯಲ್ಲಿ ಒಟ್ಟು ಶೇ 80ರಷ್ಟು ಷೇರು ಹೊಂದಿದ್ದಾರೆ. ಈ ಕುರಿತು ಕ್ವಾಂಟ್‌ಬಯೋರೆಸ್ ಕಂಪನಿಯ ಸಿಇಒ ಮತ್ತು ಬಾಸ್ ಸ್ಪಷ್ಟಪಡಿಸಿದ್ದು, 2020ರ ಜೂನ್‌ನಲ್ಲಿಯೇ ನೊವಾಕ್ ಷೇರು ಖರೀದಿಸಿದ್ದರು. ಆದರೆ ಅದರ ಮೊತ್ತ ಎಷ್ಟು ಎನ್ನುವುದನ್ನು ಕಂಪನಿ ಬಹಿರಂಗಪಡಿಸಿಲ್ಲ. ಕ್ವಾಂಟ್‌ಬಯೋರೆಸ್ ಕಂಪನಿಯಲ್ಲಿ ನೊವಾಕ್ ಶೇ 40.8 ಮತ್ತು ಅವರ ಪತ್ನಿ ಜೆಲಿನಾ ಶೇ 39.2ರಷ್ಟು ಷೇರು ಹೊಂದಿದ್ದಾರೆ. ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿ: ಮೆಡ್ವೆಡೆವ್‌, ಮುಗುರುಜಾ ಮುನ್ನಡೆ ಈ ಕಂಪನಿ ಅಭಿವೃದ್ಧಿಪಡಿಸುತ್ತಿರುವ ಕೋವಿಡ್ ಲಸಿಕೆಯನ್ನು ಬ್ರಿಟನ್‌ನಲ್ಲಿ ಪರಿಶೀಲನೆಗೆ ಒಳಪಡಿಸಲಾಗುತ್ತದೆ. ಜೊಕೊವಿಚ್ ವೀಸಾ ರದ್ದು: ಹಲವು ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ– ನಡಾಲ್ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.