ಟಾಟಾ ಓಪನ್ ಮಹಾರಾಷ್ಟ್ರ ಟೆನಿಸ್‌ ಟೂರ್ನಿ: ಯೂಕಿ ಭಾಂಬ್ರಿ ಶುಭಾರಂಭ ಪುಣೆ: ಭಾರತದ ಯೂಕಿ ಭಾಂಬ್ರಿ ಅವರು ಟಾಟಾ ಓಪನ್ ಮಹಾರಾಷ್ಟ್ರ ಟೆನಿಸ್ ಟೂರ್ನಿಯಲ್ಲಿ ಗೆಲುವಿನ ಆರಂಭ ಮಾಡಿದ್ದಾರೆ. ಸೋಮವಾರ ರಾತ್ರಿ ನಡೆದ ಪುರುಷರ ಸಿಂಗಲ್ಸ್ ಮೊದಲ ಸುತ್ತಿನ ಪಂದ್ಯದಲ್ಲಿ, ಸೆಟ್‌ ಹಿನ್ನಡೆಯಿಂದ ಪುಟಿದೆದ್ದ ಅವರು6-7 (10), 6-2, 7-5ರಿಂದ ಸ್ಲೊವೇಕಿಯಾದ ಜೋಸೆಫ್‌ ಕೊವಾಲಿಕ್ ಅವರನ್ನು ಸೋಲಿಸಿದರು. ಗಾಯದ ಹಿನ್ನೆಲೆಯಲ್ಲಿ ಎರಡು ವರ್ಷಗಳಿಂದ ಕಣಕ್ಕಿಳಿಯದಿದ್ದ ಯೂಕಿ ಇತ್ತೀಚೆಗಷ್ಟೇ ಟೆನಿಸ್‌ಗೆ ಮರಳಿದ್ದರು. ಇದಕ್ಕೂ ಮೊದಲು ಫ್ರಾನ್ಸ್‌ನ ಕ್ವೆಂಟಿನ್‌ ಹಾಲಿಸ್‌ ಅವರು ವಿಶ್ವ ಕ್ರಮಾಂಕದಲ್ಲಿ 82ನೇ ಸ್ಥಾನದಲ್ಲಿರುವ ಲಿಥುವೇನಿಯಾದ ರಿಕಾರ್ಡಸ್‌ ಬೆರಂಕಿಸ್‌ ಅವರಿಗೆ ಆಘಾತ ನೀಡಿದರು. ಕ್ವೆಂಟಿನ್‌ಗೆ6-1, 6-2ರಿಂದ ಗೆಲುವು ಒಲಿಯಿತು. ಮೊದಲ ಸುತ್ತಿನ ಮತ್ತೊಂದು ಪಂದ್ಯದಲ್ಲಿ ವಿಶ್ವ ರ‍್ಯಾಂಕಿಂಗ್‌ನಲ್ಲಿ ಈ ಹಿಂದೆ 39ನೇ ಸ್ಥಾನದಲ್ಲಿದ್ದ ಮೊಲ್ಡೊವಾದ ರಾಡು ಅಲ್ಬಾಟ್‌6-2, 7-6 (7-3)ರಿಮದ ಇಟಲಿಯ ಫೆಡರಿಕೊ ಗಾಯೊ ಅವರನ್ನು ಮಣಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.