ಬಿಲ್ಲಿ ಜೀನ್ ಕಿಂಗ್‌ ಕಪ್ ಟೆನಿಸ್‌: ಅಮೆರಿಕ ವಿರುದ್ಧ ಉಕ್ರೇನ್ ಕಣಕ್ಕೆ ಮುಂಬೈ: ರಷ್ಯಾ ಆಕ್ರಮಣದಿಂದ ನಲುಗಿರುವ ಉಕ್ರೇನ್ ದೇಶದ ತಂಡವು ಬಿಲ್ಲಿ ಜೀನ್ ಕಿಂಗ್ ಕಪ್ ಟೆನಿಸ್‌ ಟೂರ್ನಿಯಲ್ಲಿ ಅಮೆರಿಕ ತಂಡದ ಸವಾಲು ಎದುರಿಸಲಿದೆ. ಅಮೆರಿಕದ ನಾರ್ತ್‌ ಕರೋಲಿನಾದಲ್ಲಿ ಶುಕ್ರವಾರ ಮತ್ತು ಶನಿವಾರ ಪಂದ್ಯಗಳು ನಡೆಯಲಿವೆ. ಈ ಪಂದ್ಯಗಳ ಮೂಲಕ, ದೇಶವಾಸಿಗಳ ಸಮರದ ವ್ಯಾಕುಲತೆಯನ್ನು ಸ್ವಲ್ಪಮಟ್ಟಿಗೆ ಮರೆಸುವ ಪ್ರಯತ್ನ ಮಾಡುವುದಾಗಿ ಉಕ್ರೇನ್ ಆಟಗಾರ್ತಿಯರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇವು ಕ್ವಾಲಿಫೈಯರ್‌ ಪಂದ್ಯಗಳಾಗಿದ್ದು ನವೆಂಬರ್‌ನಲ್ಲಿ ಫೈನಲ್ಸ್‌ ನಡೆಯಲಿವೆ. ನವೆಂಬರ್‌ನಲ್ಲಿ ನಡೆಯಲಿರುವ ಫೈನಲ್‌ನಲ್ಲಿ ನಾವು ಜಯಿಸಿದರೆ ಟ್ರೋಫಿಯನ್ನು ದೇಶದಲ್ಲಿ ಶಾಂತಿ ನೆಲೆಸುವ ಸೂಚಕವಾಗಿ ಸ್ವೀಕರಿಸುವುದಾಗಿ ಉಕ್ರೇನ್ ತಂಡದ ನಾಯಕಿ ಓಲ್ಗಾ ಸವಚುಕ್‌ ಮತ್ತು ಸಹ ಆಟಗಾರ್ತಿ ಕ್ಯಾತರಿನಾ ಜವತ್ಸಕಾ ಹೇಳಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.