ಬಾರ್ಸಿಲೋನಾ ಓಪನ್‌: ಅಲ್ಕಾರಾಸ್‌ಗೆ ಮಣಿದ ಸಿಟ್ಸಿಪಾಸ್‌ ಬಾರ್ಸಿಲೋನಾ: ಅಗ್ರಶ್ರೇಯಾಂಕದ, ಗ್ರೀಸ್‌ ಆಟಗಾರ ಸ್ಟೆಫನೋಸ್ ಸಿಟ್ಸಿಪಾಸ್ ಅವರಿಗೆ ಆಘಾತ ನೀಡಿದ ಕಾರ್ಲೊಸ್ ಅಲ್ಕಾರಾಸ್ ಅವರು ಬಾರ್ಸಿಲೋನಾ ಓಪನ್ ಟೆನಿಸ್ ಟೂರ್ನಿಯ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಇಲ್ಲಿ ನಡೆಯುತ್ತಿರುವ ಟೂರ್ನಿಯ ಕ್ವಾರ್ಟರ್‌ಫೈನಲ್‌ನ ಜಿದ್ದಾಜಿದ್ದಿ ಪಂದ್ಯದಲ್ಲಿ ಸ್ಪೇನ್ ಆಟಗಾರ ಅಲ್ಕಾರಾಸ್‌ ಅವರಿಗೆ6-4, 5-7, 6-2ರಿಂದ ಜಯ ಒಲಿಯಿತು. 18 ವರ್ಷದ ಅಲ್ಕಾರಾಸ್‌ ಋತುವಿನ ಮೂರನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದಾರೆ. ಫೆಬ್ರುವರಿಯಲ್ಲಿ ರಿಯೊ ಡಿ ಜನೈರೊ ಟ್ರೋಫಿಯನ್ನು ಜಯಿಸಿದ್ದ‌ ಅವರು ಈ ತಿಂಗಳು ಮಿಯಾಮಿ ಓಪನ್ ತಮ್ಮದಾಗಿಸಿಕೊಂಡಿದ್ದರು. ಮೂರನೇ ಸುತ್ತಿನ ಪಂದ್ಯಗಳಲ್ಲಿ ಸಿಟ್ಸಿಪಾಸ್‌ 6-1, 6-4ರಿಂದ ಗ್ರಿಗೊರ್ ಡಿಮಿಟ್ರೊವ್ ಎದುರು, ಅಲ್ಕಾರಾಸ್‌6-3, 6-3ರಿಂದ ಜಾವುಮ್‌ ಮುನಾರ್ ವಿರುದ್ಧ ಜಯ ಸಾಧಿಸಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.